×
Ad

ನಾಳೆಯಿಂದ ಕನ್ನಡದಲ್ಲಿ ಕುರ್‌ಆನ್ ಪ್ರವಚನ

Update: 2017-01-05 23:14 IST


ತರೀಕೆರೆ,ಜ.5: ಪಟ್ಟಣದ ಬಯಲು ರಂಗ ಮಂದಿರದಲ್ಲಿ ಜ. 7 ಮತ್ತು 8ರಂದು ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಸಂಜೆ 6 ಗಂಟೆಗೆ ಕನ್ನಡದಲ್ಲಿ ಕುರ್‌ಆನ್ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.


ಜ.7ರಂದು ಆದರ್ಶ ಸಮಾಜ ಹಾಗೂ ಜ.8ರಂದು ಮಹಿಳಾ ಹಕ್ಕುಗಳು ಎಂಬ ವಿಷಯವಾಗಿ ಪ್ರವಚನವನ್ನು ಮಂಗಳೂರು ಶಾಂತಿ ಪ್ರಕಾಶನದ ಪ್ರಬಂಧಕ ಜನಾಬ್ ಮುಹಮ್ಮದ್ ಕುಂಞಿ ಪ್ರಸ್ತುತ ಪಡಿಸಲಿದ್ದಾರೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಘಟಕ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News