×
Ad

ನಾಟ ತುಂಬಿಸಿಕೊಂಡು ಹೋಗುತ್ತಿದ್ದ ವಾಹನ ವಶ

Update: 2017-01-05 23:22 IST

ಸಾಗರ, ಜ.5: ನಗರದ ಜೋಗ ರಸ್ತೆಯಲ್ಲಿ ನಾಟ ತುಂಬಿಸಿಕೊಂಡು ಹೋಗುತ್ತಿದ್ದ ವಾಹನವೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ.

ತಾಳಗುಪ್ಪಭಾಗದಿಂದ ಜೋಗ ರಸ್ತೆ ಮಾರ್ಗವಾಗಿ ಬರುತ್ತಿದ್ದ ಮಹೀಂದ್ರ ಪಿಕಪ್ ವಾಹನವನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ಸುಮಾರು 30ಸಾವಿರ ರೂ. ಮೌಲ್ಯದ ನಾಟ ಪತ್ತೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ವಾಹನ ಅಡ್ಡಗಟ್ಟಿದಾಗ ವಾಹನ ಸವಾರ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಡಿಎಫ್‌ಒ ಮೋಹನ್ ಗಂಗೊಳ್ಳಿ ಅವರ ಮಾರ್ಗದರ್ಶನ ದಲ್ಲಿ ಆರ್‌ಎಫ್‌ಒ ಟಿ.ಆರ್. ಹಿತ್ಲಮನಿ, ಉಪ ವಲಯ ಅರಣ್ಯಾಧಿಕಾರಿ ಅಣ್ಣಪ್ಪ, ನರೇಶ್, ಲೋಕೇಶ್, ಅರಣ್ಯ ರಕ್ಷಕಿ ಸುಮಿತಾ ದಾಳಿಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News