×
Ad

ಹೊಸಕೆರೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ

Update: 2017-01-06 16:46 IST

ಮೂಡಿಗೆರೆ, ಜ.6: ಹೊಸಕೆರೆ ಗ್ರಾಮದಲ್ಲಿ ಕಾಡಾನೆಗಳು ರೈತರ ಜಮೀನಿಗೆ ನಿರಂತರ ದಾಳಿಯಿಡುತ್ತಿದ್ದು, ಗುರುವಾರ ಬೆಳಗ್ಗೆ ಹೊಸಕೆರೆಯ ಚಂದ್ರಯ್ಯ ಎಂಬವರ ಭತ್ತದ ಗದ್ದೆಗೆ ನುಗ್ಗಿ ಫಸಲನ್ನು ನಾಶಪಡಿಸಿವೆ.

ಕಳೆದ ಒಂದು ವಾರದಿಂದ ಪ್ರತೀದಿನವೂ ಕಾಡಾನೆ, ಕಾಡುಕೋಣಗಳು ರೈತರ ಜಮೀನಿಗೆ ನುಗ್ಗಿ ಬೆಳೆಯನ್ನು ತುಳಿದು ತಿಂದು, ಹಾನಿಗೊಳಿಸುತ್ತಿವೆ. ಗದ್ದೆಗೂ ಹಾನಿ ಮಾಡುತ್ತಿವೆ. ಹೀಗೆ ಮುಂದುವರಿದಲ್ಲಿ ಮುಂದಿನ ವ್ಯವಸಾಯಕ್ಕೆ, ನಮ್ಮ ಜೀವನಕ್ಕೆ ತೀವ್ರ ತೊಂದರೆಯಗಲಿದೆ ಎಂದು ಚಂದ್ರಯ್ಯ ದೂರಿದ್ದಾರೆ. ಕಾಡುಪ್ರಾಣಿಗಳಿಂದ ಉಂಟಾಗಿರುವ ನಷ್ಟವನ್ನು ಪರಿಹಾರ ರೂಪದಲ್ಲಿ ನೀಡಿ ಮುಂದಿನ ವ್ಯವಸಾಯಕ್ಕೆ, ಜೀವನ ನಿರ್ವಹಣೆಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News