ಕಾಡಾನೆ ದಾಳಿಗೆ ಮನೆ ಧ್ವಂಸ
Update: 2017-01-06 22:31 IST
ನಾಪೊಕ್ಲು, ಜ.6: ಕಾಡಾನೆಯೊಂದು ಮನೆಯ ಮೇಲೆ ಮರ ಬೀಳಿಸಿ ನಷ್ಟಪಡಿಸಿರುವ ಘಟನೆ ಕಕ್ಕಬ್ಬೆ ಸಮೀಪದ ಯವಕಪಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಕುಡಿಯರ ಎ.ಮುತ್ತಪ್ಪಎಂಬವರಿಗೆ ಸೇರಿದ ಮನೆ ಜಖಂಗೊಂಡಿದ್ದು, ನಷ್ಟ ಉಂಟಾಗಿದೆ ಎನ್ನಲಾಗಿದೆ.
ಗುರುವಾರ ರಾತ್ರಿ ಮನೆಯ ಬಳಿ ಕಾಣಿಸಿಕೊಂಡ ಸಲಗ, ಬೈನೆ ಮರವೊಂದನ್ನು ತಳ್ಳಿದ್ದರಿಂದಾಗಿ ಅದು ಮನೆಯ ಮೇಲೆ ಬಿದ್ದಿದೆ. ಇದರಿಂದಾಗಿ ಛಾವಣಿಗೆ ಹಾನಿಯಾಗಿದ್ದು, ಘಟನಾಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು