ಸಾಲ ಬಾಧೆ: ರೈತ ಆತ್ಮಹತ್ಯೆ
Update: 2017-01-06 22:31 IST
ಕಡೂರು, ಜ.6: ಸಾಲದ ಬಾಧೆಯಿಂದ ರೈತನೋರ್ವ ನೇಣಿಗೆ ಶರಣಾ ಗಿರುವ ಘಟನೆ ಕಡೂರು ತಾಲೂಕು ಸಿಂಗಟಗೆರೆ ಗ್ರಾಮದಲ್ಲಿ ನಡೆದಿದೆ.
ಸಿಂಗಟಗೆರೆ ಗ್ರಾಮದ ಗಣೇಶ ಶೆಟ್ಟಿ ಎಂಬವರ ಮಗ ಪ್ರದೀಪ್(26) ನೇಣಿಗೆ ಶರಣಾಗಿರುವ ಮೃತ ದುರ್ದೈವಿ ರೈತನಾಗಿದ್ದಾನೆ. ಮೃತ ಪ್ರದೀಪ್ ಸಿಂಗಟಗೆರೆ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕ್ ಶಾಖೆಯಲ್ಲಿ ರೂ.7 ಲಕ್ಷ ಸಾಲ ಮಾಡಿದ್ದ ಎನ್ನಲಾ ಗಿದೆ.
ಬರಗಾಲದಿಂದಾಗಿ ಇರುವ ತಮ್ಮ ಜಮೀನಿನಲ್ಲಿ ಕಳೆದ ಆರು ತಿಂಗಳಿಂದ ಯಾವುದೇ ಬೆಳೆಯಾಗದಿದ್ದು, ಕೊರೆಸಿದ್ದ ಕೊಳವೆ ಬಾವಿ ಕೂಡ ವಿಫಲವಾಗಿ ಹೆಚ್ಚಿದ ಸಾಲ ಬಾಧೆಯಿಂದ ಮನನೊಂದು ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.