×
Ad

ನೇಣು ಬಿಗಿದು ಆತ್ಮಹತ್ಯೆ

Update: 2017-01-06 22:32 IST

ಚಿಕ್ಕಮಗಳೂರು,ಜ.6: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆತ್ಮಹತ್ಯೆಗೆ ಶರಣಾದವರನ್ನು ಇಂದಿರಾನಗರ ಬಡಾವಣೆಯ ಮಂಜು ನಾಥ(45) ಎಂದು ಗುರುತಿಸಲಾಗಿದೆ. ಈತ ಅತಿಯಾದ ಮದ್ಯಪಾನ ಮಾಡುತ್ತಿದ್ದು, ಇದರಿಂದ ಜೀವನದಲ್ಲಿ ಬೇಸರಗೊಂಡು ಮನೆಯಲ್ಲಿ ಯಾರೂ ಇಲ್ಲದಿರುವ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತನ ಪತ್ನಿ ಗೀತಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News