ಹೊಸಕೆರೆ ಗ್ರಾಮದಲ್ಲಿ ಕಾಡಾನೆಗಳ ಲಗ್ಗೆ: ಭತ್ತದ ಫಸಲು ನಾಶ
Update: 2017-01-06 22:35 IST
ಮೂಡಿಗೆರೆ, ಜ.6: ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಕಾಡಾನೆಗಳು ರೈತರ ಜಮೀನಿಗೆ ನಿರಂತರ ದಾಳಿಯಿಡುತ್ತಿದ್ದು, ಗುರುವಾರ ಬೆಳಗ್ಗೆ ಹೊಸಕೆರೆಯ ಚಂದ್ರಯ್ಯ ಎಂಬವರ ಭತ್ತದ ಗದ್ದೆಗೆ ನುಗ್ಗಿ ಫಸಲನ್ನು ನಾಶಪಡಿಸಿವೆ.
ಕಳೆದ ಒಂದು ವಾರದಿಂದ ಪ್ರತೀ ದಿನವೂ ಕಾಡಾನೆ, ಕಾಡುಕೋಣಗಳು ರೈತರ ಜಮೀನಿಗೆ ನುಗ್ಗಿ ಬೆಳೆಯನ್ನು ತುಳಿದು ತಿಂದು, ಹಾನಿಗೊಳಿಸಿ, ಗದ್ದೆಯ ಬದುಗಳು, ಜಮೀನಿಗೂ ಹಾನಿ ಮಾಡುತ್ತಿವೆ. ಹೀಗೆ ಮುಂದುವರಿದಲ್ಲಿ ಮುಂದಿನ ವ್ಯವಸಾಯಕ್ಕೆ, ನಮ್ಮ ಜೀವನಕ್ಕೆ ತೀವ್ರ ತೊಂದರೆಯಾಗಲಿದೆ ಎಂದು ಚಂದ್ರಯ್ಯ ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ. ಕಾಡುಪ್ರಾಣಿಗಳಿಂದ ಉಂಟಾಗಿರುವ ನಷ್ಟವನ್ನು ಪರಿಹಾರ ರೂಪದಲ್ಲಿ ನೀಡಿ ಮುಂದಿನ ವ್ಯವಸಾಯಕ್ಕೆ, ಜೀವನ ನಿರ್ವಹಣೆಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.