6 ಟಿಪ್ಪರ್ ಅಕ್ರಮ ಮರಳು ವಶ
Update: 2017-01-06 22:39 IST
ಹೊನ್ನಾವರ, ಜ.6: ಶರಾವತಿ ನದಿಯಿಂದ ಅನಧಿಕೃತ ಮರಳು ಸಾಗಣೆ ಮಾಡುತ್ತಿದ್ದ 6 ಟಿಪ್ಪರ್ ಹಾಗೂ ಒಂದು ಬೊಲೆರೋ ಸೇರಿದಂತೆ ಒಟ್ಟು 7 ವಾಹನಗಳನ್ನು ಮಾಳಕೋಡಿನಲ್ಲಿ ವಶಪಡಿಸಿಕೊಳ್ಳಲಾಗಿದೆ.
ಭಟ್ಕಳ ಉಪವಿಭಾಗಾಧಿಕಾರಿ ಎಂ.ಎನ್. ಮಂಜುನಾಥ, ನೇತೃತ್ವದಲ್ಲಿ ತಹಶೀಲ್ದಾರ ವಿ.ಆರ್.ಗೌಡ ಹಾಗೂ ಕಂದಾಯ ಸಿಬ್ಬಂದಿ ದಾಳಿ ನಡೆಸಿದರು.
ಮಂಕಿ ಪೋಲಿಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವಾಹನಗಳ ಚಾಲಕರು ಪರಾರಿಯಾಗಿದ್ದು, ವಾಹನದಲ್ಲಿರುವ ಮರಳನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿದೆ.