ಜಿಂಕೆ ಕೊಂದ ಆರೋಪಿ ಅರಣ್ಯ ಇಲಾಖೆ ಬಲೆಗೆ
Update: 2017-01-07 22:59 IST
ಮುಂಡಗೋಡ, ಜ.7: ಜಿಂಕೆಯನ್ನು ಕೊಂದು ಅದನ್ನು ಸಾಗೀಸುವ ಯತ್ನದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಓರ್ವ ಆರೋಪಿಯನ್ನು ಬಂಧಿಸಿ, ಜಿಂಕೆ ಶವವನ್ನು ವಶಕ್ಕೆ ಪಡೆದ ಘಟನೆ ತಾಲೂಕಿನ ನಂದಿಗಟ್ಟಾ ಅರಣ್ಯ ಸರ್ವೇ ನಂ. 194ರಲ್ಲಿ ಇಂದು ಬೆಳಗಿನ ಜಾವ ಸುಮಾರು 4 ಗಂಟೆಗೆ ನಡೆದಿದೆ.
ಬಂಧಿತ ಆರೋಪಿಯನ್ನು ಉಗ್ಗಿನಕೇರಿ ನಿವಾಸಿ ಕೇಶವ ಯಶವಂತ ತಾಂಬೆ(35) ಎಂದು ತಿಳಿದು ಬಂದಿದ್ದು, ಪರಾರಿಯಾದ ಆರೋಪಿಯನ್ನು ಹಸನಸಾಬ ಹುಸೈನಸಾಬ ಮುಲ್ಲಾ(35) ಎಂದು ಹೇಳಲಾಗಿದೆ.
ಬಂಧಿತ ಆರೋಪಿಯಿಂದ ಜಿಂಕೆ ಶವ, ಬಂದೂಕು, ಕಾಡತೋಸು, ಚಾಕು, ಬ್ಯಾಟರಿಯನ್ನು ವಶಪಡಿಸಿಕೊಳ್ಳಲಾಗಿದೆ. ಪರಾರಿಯಾದ ಆರೋಪಿಯನ್ನು ಬಂಧಿಸಲು ಜಾಲ ಬೀಸಲಾಗಿದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ. ಅರಣ್ಯಾಧಿಕಾರಿ ಈರೇಶ ಕಬ್ಬಿನ ಮಾರ್ಗದರ್ಶನದಲ್ಲಿ ಇಂದೂರ ಸೆಕ್ಷನ್ ಫಾರೆಸ್ಟರ್ ಬಸವರಾಜ ಪೂಜಾರ, ಗಾರ್ಡ್‌ನಿಂಗಪ್ಪ ಹಾಗೂ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.