×
Ad

ಬಾಲಕಿಯ ಅಪಹರಣ: ಆರೋಪಿಗೆ ಕಠಿಣ ಶಿಕ್ಷೆ

Update: 2017-01-07 23:02 IST

ಮಡಿಕೇರಿ, ಜ.7: ಮದುವೆಯಾಗುವುದಾಗಿ ನಂಬಿಸಿ ಬಾಲಕಿಯನ್ನು ಅಪಹರಿಸಿದ ಆರೋಪ ಸಾಕ್ಷ್ಯಾಧಾರಗಳಿಂದ ದೃಢಪಟ್ಟ ಕಾರಣ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಕಠಿಣ ಶಿಕ್ಷೆ ಸಹಿತ ದಂಡ ವಿಧಿಸಿ ತೀರ್ಪು ನೀಡಿದೆ.
   ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ರಾಣಿಗೇಟ್ ನಿವಾಸಿ ಜೀಪು ಚಾಲಕ ಎ.ಪ್ರಶಾಂತ್ ಎಂಬಾತನೆ ದಂಡ ಸಹಿತ ಶಿಕ್ಷೆಗೆ ಗುರಿಯಾದ ಅಪರಾಧಿ ಯಾಗಿದ್ದಾನೆ.
 ಚೇರಳ ಶ್ರೀಮಂಗಲ ಗ್ರಾಮದ ಚೇರುಂಬುಕೊಲ್ಲಿ ತೋಟದ ಲೈನ್‌ನಲ್ಲಿ ವಾಸವಿದ್ದ ಎಂ.ಎ ಯೂಸುಫ್ ಎಂಬವರ ಮಗಳನ್ನು ಆರೋಪಿ ಪ್ರಶಾಂತ್ 2013ರ ಆಗಸ್ಟ್ 27 ರಂದು ಮದುವೆಯ ಆಮಿಷ ತೋರಿಸಿ ಅಪಹರಿಸಿದ್ದಲ್ಲದೆ, ರಾಣಿಗೇಟ್‌ನ ಮನೆಯಲ್ಲಿ ಇರಿಸಿಕೊಂಡಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News