×
Ad

ನಾಳೆಯಿಂದ ಎಪಿಎಲ್ ಕಾರ್ಡ್ ಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭ: ಯು.ಟಿ ಖಾದರ್

Update: 2017-01-08 14:56 IST

ಬೆಳಗಾವಿ, ಜ.8: ರಾಜ್ಯದಲ್ಲಿ ರೇಷನ್ ಕಾರ್ಡ ಬಗ್ಗೆ ಸಾಕಷ್ಟು ಗೊಂದಲವಿದ್ದು, ಕಾರ್ಡ್ ವಿತರಣೆ ಇನ್ನಷ್ಟು ಸುಗಮಗೊಳಿಸಲು ನಾಳೆಯಿಂದ ಎಪಿಎಲ್ ಕಾರ್ಡ್ ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದೆ ಎಂದು ಆಹಾರ ಮತ್ತು  ನಾಗರಿಕರ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ನಡೆದ  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆನ್ ಲೈನ್ ಸೇವೆಯಿಂದ ಕಾರ್ಡ್ ವಿತರಣೆಯಲ್ಲಿ ಪಾರದರ್ಶಕತೆ ಬರಲಿದ್ದು,  ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಬಿಪಿಎಲ್ ಕಾರ್ಡ್ ಅನ್ನು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವ ಉದ್ದೇಶವಿದ್ದು ಮುಂದಿನ 15 ದಿನಗಳಲ್ಲಿ ಈ ಸೇವೆ ಅನುಷ್ಠಾನಗೊಳ್ಳಲಿದೆ.  ಬಿಪಿಎಲ್ ಮತ್ತು ಎಪಿಎಲ್ ಯೋಜನೆಯನ್ನು ಸಕಾಲ ಯೋಜನೆಯಡಿ ಸೇರಿಸಲಾಗಿದೆ ಎಂದು ಅವರು ಹೇಳಿದರು.

  • www.ahara.kar.nic.in ಈ ವೆಬ್ ಸೈಟ್ ನಲ್ಲಿ ನಾಳೆಯಿಂದ ಆನಲೈನ್ ಅರ್ಜಿ ಸಲ್ಲಿಸಬಹುದು. ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಇದ್ದರೇ ಸಾಕು. 15 ದಿನಗಳಲ್ಲಿ ಎಪಿಎಲ್ ನ ಒರಿಜನಲ್  ಕಾರ್ಡ್ ಪಡೆಯಬಹುದಾಗಿದೆ.
  • ಬಿಪಿಎಲ್ ಕಾರ್ಡ್ ಗಾಗಿ ಜನರು ಪಂಚಾಯತ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ನಗರ ಪ್ರದೇಶದವರು ಪುರಸಭೆ ಮತ್ತು ಪಾಲಿಕೆಯಲ್ಲಿ ಅರ್ಜಿ ಸಲ್ಲಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News