ಸಾಗರೋತ್ಸವ ಸಾಂಸ್ಕೃತಿಕ ಬಿಂಬ: ಸಚಿವ ಕಾಗೋಡು
ಸಾಗರ, ಜ.8: ಸಾಗರೋತ್ಸವ ಕಾರ್ಯಕ್ರಮ ಸಾಂಸ್ಕೃ ತಿಕ ಬಿಂಬವಾಗಿ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಿ ರುವುದು ಸ್ವಾಗತಾರ್ಹ ಎಂದು ಸಚಿವ ಕಾಗೋಡು ತಿಮ್ಮಪ್ಪತಿಳಿಸಿದರು. ಇಲ್ಲಿನ ಗಾಂಧಿಮೈದಾನದಲ್ಲಿ ಶನಿವಾರ ಸಹೃದಯ ಬಳಗ ಹಾಗೂ ತಾಲೂಕು ಇತಿಹಾಸ ವೇದಿಕೆ ಆಶ್ರಯದಲ್ಲಿ ಹಮ್ಮಿಕೊ
ಳ್ಳಲಾಗಿದ್ದ ‘ಸಾಗರೋತ್ಸವ-2017’ ಹಾಗೂ ರಾಷ್ಟ್ರಮಟ್ಟದ ಸಹೃದಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ನಡುವಿನ ಸಾಧಕರನ್ನು ಗುರುತಿಸಿ, ಗೌರವಿಸುವ ಸತ್ಸಂಪ್ರದಾಯ ಒಳ್ಳೆಯದು. ಇದರಿಂದ ಇತರರು ತಾವು ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅವಕಾಶವಾಗುತ್ತದೆ. ಸಹೃದಯ ಬಳಗ 15 ವರ್ಷಗಳಿಂದ ಸಾಧಕರನ್ನು ಗುರುತಿಸಿ, ಅವರಿಗೆ ಸಹೃದಯ ಪ್ರಶಸ್ತಿ ನೀಡುತ್ತಿದೆ. ಮುಂದಿನ ದಿನಮಾನಗಳಲ್ಲಿ ಸಾಧಕರ ಸಂಖ್ಯೆ ಹೆಚ್ಚಲಿ ಎಂದು ಅವರು ಶುಭ ಹಾರೈಸಿದರು.
ವೈದ್ಯೆ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ನಮ್ಮಲ್ಲಿ ನಗಲು ಸಮಯವಿಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ. ದಿನದ ಸ್ವಲ್ಪಹೊತ್ತು ನಗುವುದರಿಂದ ದೇಹಾರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಬಳಗವು 15 ವರ್ಷಗಳಿಂದ ಹೊಸವರ್ಷಾರಂಭದಲ್ಲಿ ನಗೆಹಬ್ಬ ಆಯೋಜಿಸಿ, ಸಹೃದಯರನ್ನು ಒಂದೆಡೆ ಸೇರಿಸಿ ಅವರಿಗೆ ಸಾಂಸ್ಕೃತಿಕ ರಸದೌತಣ ಬಡಿಸುವುದು ಪ್ರಶಂಸಾರ್ಹ ಎಂದರು. ಕೆಳದಿ ರಾಜಗುರು ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಧಾರವಾಡದ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಮೈಸೂರಿನ ಜಿ.ಎಸ್. ಭಟ್, ಬೆಂಗಳೂರಿನ ಚಂದ್ರಶೇಖರ ಕಾಕಾಲ್, ಶಿರಸಿಯ ಜಿ.ಎಂ.ಹೆಗಡೆ, ಕುಮಟಾದ ಪ್ರೊ. ವಿಷ್ಣು ಜೋಷಿ ಆರ್., ಕೆ.ಆರ್. ನಗರದ ಟಿ.ಎಸ್. ನರಸಿಂಹ ನಾಯಕ್, ಶಿವಮೊಗ್ಗದ ಡಿ.ಎಂ. ಅರವಿಂದ್ ಮಲ್ಲಿಕ್, ಹಾಸನದ ಶೈಲೇಶ್ ಕುಮಾರ ದಾಸ್, ಹೈದರಾಬಾದ್‌ನ ಅರ್ಪಿತಾ, ವಿಜಯಪುರದ ವರ್ಷ ಎಸ್. ಬಿರಾದಾರ ಅವರಿಗೆ ರಾಷ್ಟ್ರಮಟ್ಟದ ಸಹೃದಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಭದ್ರಾವತಿಯ ಎಚ್.ರಾಮೇಗೌಡ, ತೀರ್ಥಹಳ್ಳಿಯ ಡಾ. ಎಚ್.ಎಸ್.ಕೃಷ್ಣಪ್ಪ, ಸಾಗರದ ಬಿ.ಜಿ.ದಿನೇಶ್ ಬರದವಳ್ಳಿ, ಮಧುನಿಶಾ, ಶಿವಮೊಗ್ಗದ ಆಕಾಶ್ ಎಸ್.ಎಸ್., ಪ್ರಿಯಾಂಕ ಅವರಿಗೆ ಸಹೃದಯ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು
. ಸಾಹಿತಿ ಡಾ. ನಾ.ಡಿಸೋಜ ಅಭಿನಂದನಾ ಭಾಷಣ ಮಾಡಿದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ನಗರಸಭೆ ಅಧ್ಯಕ್ಷೆ ಎನ್.ಉಷಾ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಝಾರ್ ಖಾನ್, ಸದಸ್ಯ ಆರ್.ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಉಪಸ್ಥಿತರಿದ್ದರು. ಸಾಗರ ಟೌನ್ ಮಹಿಳಾ ಸಮಾಜದ ಸದಸ್ಯರು ಪ್ರಾರ್ಥಿಸಿದರು. ಡಾ. ಕೆಳದಿ ವೆಂಕಟೇಶ್ ಜೋಯಿಸ್ ಸ್ವಾಗತಿಸಿದರು. ಸಹೃದಯ ಬಳಗದ ಅಧ್ಯಕ್ಷ ಜಿ.ನಾಗೇಶ್ ಪ್ರಾಸ್ತಾವಿಕ ಮಾತನಾಡಿದರು.
ಲೋಕೇಶಕುಮಾರ್ ವಂದಿಸಿದರು. ವಿ.ಟಿ.ಸ್ವಾಮಿ ನಿರೂಪಿಸಿದರು. ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಗುಡ್ಡಪ್ಪಜೋಗಿ ಮತ್ತು ತಂಡದವರಿಂದ ಜೋಗಿಪದ ಸೇರಿದಂತೆ ವಿವಿಧ ಕಲಾ ತಂಡಗಳಿಂದ ಮನರಂಜನೆ ಕಾರ್ಯಕ್ರಮಗಳು ನಡೆದವು.
ಮೇಘರಾಜ್ ಉಪಸ್ಥಿತರಿದ್ದರು. ಸಾಗರ ಟೌನ್ ಮಹಿಳಾ ಸಮಾಜದ ಸದಸ್ಯರು ಪ್ರಾರ್ಥಿಸಿದರು. ಡಾ. ಕೆಳದಿ ವೆಂಕಟೇಶ್ ಜೋಯಿಸ್ ಸ್ವಾಗತಿಸಿದರು. ಸಹೃದಯ ಬಳಗದ ಅಧ್ಯಕ್ಷ ಜಿ.ನಾಗೇಶ್ ಪ್ರಾಸ್ತಾವಿಕ ಮಾತನಾಡಿದರು. ಲೋಕೇಶಕುಮಾರ್ ವಂದಿಸಿದರು. ವಿ.ಟಿ.ಸ್ವಾಮಿ ನಿರೂಪಿಸಿದರು. ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಗುಡ್ಡಪ್ಪಜೋಗಿ ಮತ್ತು ತಂಡದವರಿಂದ ಜೋಗಿಪದ ಸೇರಿದಂತೆ ವಿವಿಧ ಕಲಾ ತಂಡಗಳಿಂದ ಮನರಂಜನೆ ಕಾರ್ಯಕ್ರಮಗಳು ನಡೆದವು.