×
Ad

ಹೊನ್ನಾವರ: ಗೋಮಾಂಸ ವಶ

Update: 2017-01-08 23:31 IST

ಹೊನ್ನಾವರ, ಜ.8: ತಾಲೂಕಿನ ಕಾಸರಕೋಡದ ಚರ್ಚ್‌ಕ್ರಾಸ್ ಬಳಿ ಕೆಟ್ಟು ನಿಂತಿದ್ದ ಕ್ರೇನ್ ವಾಹನದಲ್ಲಿ ಸಂಗ್ರಹಿಸಿದ್ದ ಗೋಮಾಂಸವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ.
ಕಾಸರಕೋಡದ ಚರ್ಚ್ ಕ್ರೋಸ್ ಬಳಿ ಕೆಟ್ಟು ನಿಂತಿದ್ದ ಕ್ರೇನ್ ವಾಹನದಲ್ಲಿ ಹಲವಾರು ದಿನಗಳಿಂದ ಗೋಮಾಂಸವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಅಲ್ಲಿನ ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಕೊಂಡಿತ್ತು.


ಗೋಮಾಂಸವನ್ನು ಮಾರುತ್ತಿರುವ ಆರೋಪಿತನ ಚಲನವಲನವನ್ನು ಗಮನಿಸಿದ ಸಾರ್ವಜನಿಕರು ಕ್ರೇನ್ ವಾಹನದತ್ತ ಪ್ರಯಾಣ ಬೆಳೆಸಿದ್ದಾರೆ. ಸಾರ್ವಜನಿಕರು ಕ್ರೇನ್‌ನತ್ತ ಮುಖಮಾಡಿ ಬರುವುದನ್ನು ಗಮನಿಸಿದ ಆರೋಪಿ ಪರಾರಿಯಾಗಿದ್ದಾನೆ.


ವಾಹನದಲ್ಲಿ ಸುಮಾರು 9 ಕೆ.ಜಿ ಯಷ್ಟು ಗೋಮಾಂಸ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಚೀಲದಲ್ಲಿ ಸಂಗ್ರಹಿಸಿಟ್ಟಿರುವುದು ಕಂಡುಬಂದಿದೆ. ಸ್ಥಳಕ್ಕೆ ಹೊನ್ನಾವರ ಪಿಎಸ್ಸೈ ಗಣೇಶ ಜೋಗಳೇಕರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News