ಇಬ್ಬರು ಆತ್ಮಹತ್ಯೆ: ಪ್ರಕರಣ ದಾಖಲು
Update: 2017-01-08 23:32 IST
ಹೊನ್ನಾವರ, ಜ.8: ತಾಲೂಕಿನ ಮಂಕಿ ಮತ್ತು ಅಳಂಕಿಯಲ್ಲಿ ನಡೆದ ಆತ್ಮಹತ್ಯೆ ಪ್ರಕರಣದ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಮಂಕಿಯ ಮಂಜುನಾಥ ಶಿವರಾಮ ನಾಯ್ಕ (51) ಎಂಬವರು ಮಾವನ ಮನೆ ಹೊಸಪಟ್ಟಣಕ್ಕೆ ಬಂದಿದ್ದ ವೇಳೆ, ಸ್ಮಶಾನ ಬಾವಿಯ ಬಳಿ ನೀರು ತೆಗೆಯಲು ಹೋದಾಗ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎಂದು ಅತನ ಪತ್ನಿ ಉಮಾ ಮಂಕಿ ಪೋಲಿಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆ ನಡೆಸಿದ್ದಾರೆ. ತಾಲೂಕಿನ ಅಳ್ಳಂಕಿಯ ಸಿಮಾವ ಥಾಮಸ್ ಡಯಾಸ್ (60) ಎಂಬಾತ ಜೀವನದಲ್ಲಿ ಜಿಗುಪ್ಸೆಯಿಂದ ತನ್ನ ಮನೆಯ ಪಕ್ಕಾಸಿಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಆತನ ಮಗ ನೀಡಿದ ದೂರನ್ನು ದಾಖಲಿಸಿಕೊಂಡ ಹೊನ್ನಾವರ ಪೊಲೀಸರು ತನಿಖೆ ನಡೆಸಿದ್ದಾರೆ.