ಲಾರಿ ಮುಷ್ಕರ ರದ್ದು
Update: 2017-01-08 23:37 IST
ಚಿಕ್ಕಮಗಳೂರು, ಜ.8: ಜಿಲ್ಲಾ ಲಾರಿ ಮಾಲಕರು ಜ.9ರಂದು ನಡೆಸಬೇಕೆಂದಿದ್ದ ಮುಷ್ಕರವನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷ ಅಮಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ಲಾರಿ ಮಾಲಕರ ಸಭೆ ಕರೆದು ಚರ್ಚಿಸಿ, ಬೇಡಿಕೆ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂದೆಗೆದುಕೊಳ್ಳಲಾಗಿದೆ ಎಂದಿದ್ದಾರೆ.