ಅಪಘಾತ: ಬೈಕ್ ಸವಾರ ಸಾವು
Update: 2017-01-09 23:02 IST
ತೀರ್ಥಹಳ್ಳಿ, ಜ.9: ತಾಲೂಕಿನ ಕಟ್ಟೆಹಕ್ಕಲು ಸಮೀಪದ ಹೇರಂಬಾಪುರದಲ್ಲಿ ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ವರದಿಯಾಗಿದೆ. ಮೃತಪಟ್ಟ ವ್ಯಕ್ತಿ ಪ್ರಶಾಂತ್(25) ಎಂದು ಗುರುತಿಸಲಾಗಿದೆ. ಈ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.