×
Ad

ತುಮಕೂರಿನ ಗೌರಿಶಂಕರ ಸ್ವಾಮೀಜಿ ವಿಧಿವಶ

Update: 2017-01-11 10:54 IST

ಬೆಂಗಳೂರು, ಜ.11: ಸಿದ್ದಗಂಗಾ ಮಠದ ಉತ್ತರಾಧಿಕಾರಿ ಪಟ್ಟಕ್ಕಾಗಿ ಕಾನೂನು ಹೋರಾಟ ನಡೆಸುತ್ತಿದ್ದ ತುಮಕೂರಿನ ಗುಬ್ಬಿ ತಾಲ್ಲೂಕಿನ ಗೊಲ್ಲಹಳ್ಳಿಯ ಗೌರಿಶಂಕರ ಸ್ವಾಮೀಜಿ (71) ಅವರು ಬುಧವಾರ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ
ಬಹುಅಂಗಾಗ ವೈಫಲ್ಯದಿಂದ  ಬಳಲುತ್ತಿದ್ದ ಗೌರಿಶಂಕರ ಸ್ವಾಮಿ ಅವರನ್ನು  ಇತ್ತೀಚೆಗೆ ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಅವರು  ನಿಧನರಾದರು.
ತುಮಕೂರಿನ ಸಿದ್ದಗಂಗಾ ಮಠದ ಉತ್ತರಾಧಿಕಾರಿ ಪಟ್ಟಕ್ಕಾಗಿ  ಹಲವು ದಶಕಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ಗೌರಿಶಂಕರ ಸ್ವಾಮೀಜಿ  ತುಮಕೂರಿನ ಗುಬ್ಬಿ ತಾಲ್ಲೂಕಿನ ಗೊಲ್ಲಹಳ್ಳಿಯಲ್ಲಿ ಸಿದ್ಧಗಂಗಾ ಮಠ ಸ್ಥಾಪಿಸಿ ಅಲ್ಲಿಯೇ ನೆಲೆಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News