×
Ad

​ ಇಂದು ದಾವಣಗೆರೆ ಎಪಿಎಂಸಿ ಮತದಾನ

Update: 2017-01-11 23:01 IST

ದಾವಣಗೆರೆ, ಜ.11: ಜಿಲ್ಲೆಯ ಆರು ತಾಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳಿಗೆ ಜ.12ರಂದು ಮತದಾನ ನಡೆಯಲಿದೆ.
ಎಪಿಎಂಸಿ ಚುನಾವಣೆ ಹಿನ್ನ್ನೆಲೆಯಲ್ಲಿ ಬುಧವಾರ ನಗರದ ಮೋತಿವೀರಪ್ಪ ಕಾಲೇಜು ಮೈದಾನದಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು. ಮತಗಟ್ಟೆ ಅಧಿಕಾರಿಗಳು ನಿಯೋಜಿತಗೊಂಡ ಸ್ಥಳಗಳಿಗೆ ಮತಪೆಟ್ಟಿಗೆಯೊಂದಿಗೆ ತೆರಳಿದರು. ಮತದಾನ ಪ್ರಕ್ರಿಯೆ ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಮತದಾನ ಮುಗಿದ ನಂತರ ಮೋತಿವೀರಪ್ಪಕಾಲೇಜಿನಲ್ಲಿ ಮೊಹರಾದ ಮತಪೆಟ್ಟಿಗೆ ಇಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಥಳದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.

ಜ.14ರಂದು ಮೋತಿವೀರಪ್ಪ ಕಾಲೇಜಿನಲ್ಲಿ ಬೆಳಗ್ಗೆ 8ರಿಂದ ಮತ ಎಣಿಕೆ ಪ್ರಾರಂಭಗೊಳ್ಳಲಿದೆ ಎಂದು ತಹಶೀಲ್ದಾರ್ ಸಂತೋಷ್ ತಿಳಿಸಿದ್ದಾರೆ.
ಸಕಲ ಸಿದ್ಧತೆ
ಜ.12ರಂದು ನಡೆಯುವ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಶ್ರೀಧರ್‌ಮೂರ್ತಿ ತಿಳಿಸಿದರು.
 ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ. 12ರಂದು ನಡೆಯುವ ಚುನಾವಣೆಗೆ ಮತಗಟ್ಟೆ ಕೇಂದ್ರಗಳಿಗೆ ತೆರಳುವ ಅಧಿಕಾರಿಗಳಿಗೆ ಮತಪೆಟ್ಟಿಗೆ ಸೇರಿದಂತೆ ಪರಿಕರ ನೀಡಲಾಗಿದ್ದು, 30 ಮತಗಟ್ಟೆ ಕೇಂದ್ರಗಳಿದ್ದು, ಚುನಾವಣೆ ಸಿಬ್ಬಂದಿಗಾಗಿ 120 ಜನ ಕಾರ್ಯನಿರ್ವಹಿಸಲಿದ್ದು, 60 ಜನ ಪೊಲೀಸರು ಮತಗಟ್ಟೆ ಕೇಂದ್ರದಲ್ಲಿ ಬಂದೋಬಸ್ತ್ ವಹಿಸಲಿದ್ದಾರೆ. ಈ ಎಲ್ಲಾ ಸಿಬ್ಬಂದಿಗೆ ಮತಗಟ್ಟೆ ಕೇಂದ್ರಕ್ಕೆ ತೆರಳಲು 6 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಚುನಾವಣೆ ನಡೆಯುವ ಶಾಲಾ ಅಥವಾ ಗ್ರಾಮ ಪಂಚಾಯತ್ ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಉಳಿದ ಶಾಲೆಗಳು ಹಾಗೂ ಸರಕಾರಿ ಕಚೇರಿಗಳು ಎಂದಿನಂತೆ ಕೆಲಸ ನಿರ್ವಹಿಸಲಿವೆ.
ಜ. 12ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಚುನಾವಣೆ ನಡೆಯಲಿದ್ದು, 4 ಗಂಟೆಯ ನಂತರ ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತದಾನ ಪೆಟ್ಟಿಗೆಯನ್ನು ಇಡುವ ವ್ಯವಸ್ಥೆ ಮಾಡಲಾಗಿದೆ. ಜ. 14ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News