×
Ad

​ಸ್ಕಾರ್ಪಿಯೊ ಪಲ್ಟಿ : ಓರ್ವ ಸಾವು

Update: 2017-01-11 23:11 IST

ಸಾಗರ,ಜ.11: ತಾಲೂಕಿನ ಹುಲಿದೇವರಬನ ಸಮೀಪದ ಕೌತಿ ಕ್ರಾಸ್‌ನಲ್ಲಿ ಸ್ಕಾರ್ಪಿಯೊ ವಾಹನವೊಂದು ಪಲ್ಟಿ ಹೊಡೆದ ಪರಿಣಾಮ ಓರ್ವ ಯುವಕ ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಸಾಗರದ ಜನ್ನತ್‌ಗಲ್ಲಿ ವಾಸಿ ಸಮೀಲ್ (22) ಮೃತ ಯುವಕ ಜನ್ನತ್‌ಗಲ್ಲಿಯ ಆರು ಜನ ಯುವಕರು ಸಾಗರದಿಂದ ಹೊಳೆಬಾಗಿಲಿಗೆ ಸ್ಕಾರ್ಪಿಯೊ ವಾಹನದಲ್ಲಿ (ಕೆಎ20 ಎಂಎ 3451) ಹೋಗುತ್ತಿದ್ದರು.

ಈ ಸಂದರ್ಭದಲ್ಲಿ ಸ್ಕಾರ್ಪಿಯೊ ತಿರುವಿನಲ್ಲಿ ಮೂರು ಪಲ್ಟಿ ಹೊಡೆದಿದೆ. ಸಮೀಲ್ ಸ್ಥಳದಲ್ಲಿಯೆ ಮೃತಪಟ್ಟಿದ್ದು, ವಾಹನದಲ್ಲಿದ್ದ ಮೂವರಿಗೆ ಗಂಭೀರ ಗಾಯವಾಗಿದ್ದು, ಸಾಗರ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಿವೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News