×
Ad

​ಗಡಿ ಭದ್ರತಾ ಪಡೆಯ ಹುದೇರಿ ಮೋಹನ ನಿಧನ

Update: 2017-01-11 23:15 IST

ವೀರಾಜಪೇಟೆ, ಜ.11: ಗಡಿ ಭದ್ರತಾ ಪಡೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿ ಪಶ್ಚಿಮ ಬಂಗಾಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಡಿಕೇರಿಯ ಮದೆನಾಡು ಗ್ರಾಮದ ಹುದೇರಿ ಮೋಹನ (51) ಇಂದು ಬೆಳಗ್ಗೆ 11:15 ಕ್ಕೆ ನಿಧನ ಹೊಂದಿರುವುದಾಗಿ ತಿಳಿದುಬಂದಿದೆ.


ಕಳೆದ 30 ವರ್ಷಗಳಿಂದ ಬಿಎಸ್‌ಎಫ್‌ನಲ್ಲಿ ಸೇವೆಯಲ್ಲಿದ್ದ ಅವರು ಹತ್ತು ದಿನಗಳ ಹಿಂದೆ ಕರ್ತವ್ಯ ನಿರತರಾಗಿದ್ದಾಗ ಕುಸಿದು ಬಿದ್ದಿದ್ದರು. ನಂತರ ಸಹೋದ್ಯೋಗಿಗಳು ಬಂಗಾಳದ ಮಾಳ್ಡಾದ ಆಸ್ಪತ್ರೆಗೆ ದಾಖಲಿಸಿದ್ದರು.

ಕಳೆದ ಹತ್ತು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿದ್ದ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಮೋಹನ್‌ರವರ ಮೃತದೇಹ ಇಂದು (ಗುರುವಾರ) ಕೊಲ್ಕತ್ತಾದಿಂದ ಬೆಂಗಳೂರಿಗೆ ತಲುಪಲಿದ್ದು, ಬೆಂಗಳೂರಿನ ಬಿಎಸ್‌ಎಫ್ ಕೇಂದ್ರ ಸ್ಥಾನದಲ್ಲಿ ಗೌರವ ಸಲ್ಲಿಸಲಾಗುವುದು. ನಂತರ ಶುಕ್ರವಾರದಂದು ಹುಟ್ಟೂರು ಮದೆನಾಡಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.ಇವರು ಪತಿ, ಪುತ್ರಿಯರಾದ ಕಾವ್ಯಾ ಹಾಗೂ ಇಂದು ಅವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News