​ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ತಂಡಕ್ಕೆ 10 ಕಂಚಿನ ಪದಕ

Update: 2017-01-11 17:56 GMT

ಮಂಗಳೂರು, ಜ.11: ಎಸ್‌ಜಿಎಫ್‌ಐ ನಿಂದ ದಿಲ್ಲಿಯಲ್ಲಿ ನಡೆದ 62ನೆ ರಾಷ್ಟ್ರೀಯ ಯೋಗ ಕ್ರೀಡಾಕೂಟದಲ್ಲಿ 17-19 ವರ್ಷದೊಳಗಿನ ಹೆಣ್ಣು ಮಕ್ಕಳ ವಿಭಾಗದಲ್ಲಿ ‘ನಮ್ಮ ವನಶ್ರೀ’ ಮಂಜಪ್ಪಅವರ ಮಾರ್ಗದರ್ಶನದಲ್ಲಿ ಕರ್ನಾಟಕದ ಲಕ್ಷ್ಮೀ, ನಿರ್ಮಲಾ, ಪ್ರಣಮ್ಯ, ಗೌರಿ ಕಾರಂತ್, ಸಂಧ್ಯಾ, ಎಂ.ಎಸ್. ಗಾನಶ್ರೀ, ಶ್ರದ್ಧಾ ಪಾಟೀಲ್ ಹಾಗೂ ಗಂಡು ಮಕ್ಕಳ ವಿಭಾಗದಲ್ಲಿ ಶರತ್ ಮತ್ತು ಪ್ರಜ್ವಲ್ ಅವರನ್ನೊಳಗೊಂಡ ತಂಡವು 10 ಕಂಚಿನ ಪದಕಗಳನ್ನು ಗೆಲ್ಲುವುದರೊಂದಿಗೆ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
 ಕ್ರೀಡಾ ವಿಭಾಗದ ಸಹ ನಿರ್ದೇಶಕ ಪ್ರಹ್ಲಾದ್‌ಗೌಡ ವಿಜೇತರನ್ನು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News