×
Ad

ಬಿಜೆಪಿ ಎಂಎಲ್‌ಸಿ ಸಭೆಗೆ ಈಶ್ವರಪ್ಪಗೆ ಆಹ್ವಾನವಿಲ್ಲ

Update: 2017-01-12 12:30 IST

  ಬೆಂಗಳೂರು, ಜ.12: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಗುರುವಾರ ಸಂಜೆ ನಡೆಯಲಿರುವ ಎಂಎಲ್‌ಸಿಗಳ ಸಭೆಗೆ ಪರಿಷತ್‌ನ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪಗೆ ಆಹ್ವಾನ ನೀಡದೇ ಕಡೆಗಣಿಸಲಾಗಿದೆ.

ವಿಧಾನಪರಿಷತ್‌ನಲ್ಲಿ ಬಿಜೆಪಿ ಪಕ್ಷದಲ್ಲಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸಹಿತ ಒಟ್ಟು 25 ಎಂಎಲ್‌ಸಿಗಳಿದ್ದಾರೆ. ಈಶ್ವರಪ್ಪ ಅವರನ್ನು ಬಿಟ್ಟು ಉಳಿದೆಲ್ಲಾ ಎಂಎಲ್‌ಸಿಗಳಿಗೆ ಸಭೆಗೆ ಆಹ್ವಾನ ನೀಡಲಾಗಿದೆ. ಯಡಿಯೂರಪ್ಪರ ವಿರುದ್ಧ ಬಂಡಾಯ ಎದ್ದಿರುವ ಈಶ್ವರಪ್ಪರನ್ನು ಪರಿಷತ್ ವಿಪಕ್ಷ ಸ್ಥಾನದಿಂದ ಕೆಳಗಿಸುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಆಗ್ನೇಯ ಶಿಕ್ಷಕರ ಕ್ಷೇತ್ರ ಉಪಚುನಾವಣೆಯ ಸಿದ್ಧತೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News