×
Ad

ಅಕ್ರಮ ಮರ ಸಾಗಾಟ : ಓರ್ವನ ಬಂಧನ

Update: 2017-01-12 20:09 IST

ಕುಶಾಲನಗರ, ಜ.12:ಸಮೀಪದ ಕಣಿವೆ ಬಳಿ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಸಂದರ್ಭ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಲಾರಿ ಹಾಗೂ ಲಕ್ಷಾಂತರ ಮೌಲ್ಯದ ತೇಗ ಮತ್ತು ನಂದಿ ಮರಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನಾ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ಸಂದರ್ಭ ಸೋಮವಾರಪೇಟೆಯ ಹಾನಗಲ್ ಕಡೆಯಿಂದ ಬೆಟ್ಟದಪುರ ಕಡೆಗೆ ಅಕ್ರಮ ಮರ ಸಾಗಾಟ ಪತ್ತೆಯಾಗಿದೆ.

ಅಂದಾಜು 2 ಲಕ್ಷ ಮೌಲ್ಯದ ತೇಗ ಮತ್ತು ನಂದಿ ಮರದ ನಾಟಾಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಂ.ಎಸ್.ಚಿಣ್ಣಪ್ಪ ತಿಳಿಸಿದ್ದಾರೆ. ಆರೋಪಿ ಸುಜಿತ್ ಎಂಬಾತನನ್ನು ವಿಚಾರಣೆಗೊಳಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಶಿವರಾಜ್, ಮಂಜೇಗೌಡ, ಗಣೇಶ್, ಚಾಲಕ ಜಗ್ಗ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News