×
Ad

ನೋಂದಾವಣೆ ಕಡ್ಡಾಯ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಜಿ. ಎಲ್. ಚೆಲುವೇಗೌಡ

Update: 2017-01-12 23:15 IST

ಶಿವಮೊಗ್ಗ, ಜ. 12: ದೇಶದಾದ್ಯಂತ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ್ಲ ನೋಂದಾಯಿತ ವರ್ತಕರು ವ್ಯಾಪಾರ ವಹಿವಾಟುಗಳನ್ನು ಸುಗಮವಾಗಿ ನಡೆಸುಲು ಅನುಕೂಲವಾಗುವಂತೆ ಜ. 15 ರೊಳಗಾಗಿ ಜಿಎಸ್‌ಟಿ ಅಡಿಯಲ್ಲಿ ದಾಖಲಾತಿ ಮಾಡಿಕೊಳ್ಳುವ ಅಗತ್ಯವಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಜಿ. ಎಲ್. ಚೆಲುವೇಗೌಡ ಹೇಳಿದರು.


ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ವರ್ತಕರು ಮೌಲ್ಯವರ್ಧಿತ ತೆರಿಗೆಯಿಂದ ಸರಕು ಮತ್ತು ಸೇವಾ ತೆರಿಗೆ ಪದ್ಧತಿಯ ಕಡೆಗೆ ಸಾಗಲು ಜಿಎಸ್‌ಟಿ ಅಡಿ ನೋಂದಾವಣಿ ಮಾಡಿಸಿಕೊಳ್ಳಬೇಕು. ಈವರೆಗೆ ಶಿವಮೊಗ್ಗ ವಲಯಕ್ಕೆ ಸಂಬಂಧಿಸಿದಂತೆ 10 ಲಕ್ಷ ರೂ.ಗಳಿಗೂ ಮೀರಿದ ವ್ಯಾಪಾರ ವ್ಯವಹಾರ ಮಾಡುತ್ತಿರುವ ನೋಂದಾಯಿತ 35,000 ಜನರಲ್ಲಿ ಶೇ.50 ರಷ್ಟು ವ್ಯವಹಾರಸ್ಥರು ಜಿಎಸ್‌ಟಿ ಅಡಿಯಲ್ಲಿ ನೋಂದಾವಣೆ ಮಾಡಿಕೊಂಡಿದ್ದಾರೆ. ಈ ನೋಂದಣಿಯು ವ್ಯವಹಾರಸ್ಥರಿಗೆ ಸಹಕಾರಿಯಾಗಿದೆ ಎಂದರು.


ಜಿಎಸ್‌ಟಿ ದಾಖಲಾತಿ ಹೊಂದಲು ಹಾಗೂ ವರ್ತಕರಲ್ಲಿ ಈ ಕುರಿತು ಅರಿವು ಮೂಡಿಸಲು ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಅನೇಕ ಮಾಹಿತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇಲಾಖೆಯ ಅಂತರ್ಜಾಲ ತಾಣದಲ್ಲಿ ವರ್ತಕರ ಅನುಕೂಲಕ್ಕಾಗಿ ಪ್ರಶ್ನೋತ್ತರ ಮಾದರಿಯಲ್ಲಿ ಮಾಹಿತಿಯನ್ನು ಅಳವಡಿಸಲಾಗಿದೆ ಎಂದರು.


ಈ ಸಂಬಂಧ ಮುಖ್ಯಮಂತ್ರಿಗಳೂ ಕೂಡ ಮೌಲ್ಯವರ್ಧಿತ ತೆರಿಗೆಯಿಂದ ಸರಕು ಮತ್ತು ಸೇವಾ ತೆರಿಗೆಗೆ ಸುಗಮವಾಗಿ ಸ್ಥಿತ್ಯಂತರ ಹೊಂದುವಂತೆ ಮೌಲ್ಯವರ್ಧಿತ ತೆರಿಗೆ, ಮನೋರಂಜನಾ ತೆರಿಗೆ, ವಿಲಾಸ ತೆರಿಗೆಯಡಿ ನೋಂದಾಯಿತ ಎಲ್ಲ ವರ್ತಕರು ಸರಕು ಮತ್ತು ಸೇವಾ ತೆರಿಗೆ ಅಡಿ ದಾಖಲಾತಿ ಮಾಡಿಸಿಕೊಳ್ಳುವಂತೆ ಹಾಗೂ ತೊಂದರೆಯಿಲ್ಲದೆ ಸುಲಲಿತವಾಗಿ ವ್ಯಾಪಾ ರದಲ್ಲಿ ತೊಡಗಿಸಿಕೊಳ್ಳುವಂತೆ ವರ್ತಕರಲ್ಲಿ ಮನವಿ ಮಾಡಿದ್ದಾರೆ.

ವರ್ತಕರು ಹೆಚ್ಚಿನ ಮಾಹಿತಿಗಾಗಿಇಲಾಖೆಯ ಅಂತಜಾಲರ್ತಾಣ ಡಿಡಿಡಿ.ಜಠಿ.ಜಟ.ಜ್ಞಿ ನ್ನು ವೀಕ್ಷಿಸಬಹುದಾಗಿದೆ ಎಂದರು. ಎಸ್.ಆರ್.ುಳಸೀ ದಾಸ್, ಡಾ.ಬಿ.ಸಿ. ವಿಜಯ ಕುಮಾರ್ ಮತ್ತು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News