ಸಬ್‌ಮರೀನ್ ಖಾಂದೇರಿ ರಾಷ್ಟ್ರಕ್ಕೆ ಅರ್ಪಣೆ
Update: 2017-01-12 23:55 IST
ಅತ್ಯಂತ ರಹಸ್ಯ ಚಲನಾಶಕ್ತಿಯುಳ್ಳ, ಟಾರ್ಪೆಡೋಸ್‌ಗಳಿಂದ ಘಾತಕ ದಾಳಿ ಮಾಡುವ ಸಾಮರ್ಥ್ಯವುಳ್ಳ ಮತ್ತು ಹಡಗು ನಾಶಕ ಕ್ಷಿಪಣಿಗಳನ್ನು ಹೊಂದಿರುವ, ನೀರಿನಡಿ ಅಥವಾ ನೀರಿನ ಮೇಲೆ ಚಲಿಸಬಲ್ಲ ದ್ವಿತೀಯ ಸ್ಕಾರ್ಪಿಯನ್ ದರ್ಜೆಯ ಸಬ್‌ಮರೀನ್ ‘ಖಾಂದೇರಿ’ಗೆ ಗುರುವಾರ ಮುಂಬೈನ ಮಜಗಾಂವ್ ಹಡಗುಕಟ್ಟೆಯಲ್ಲಿ ಚಾಲನೆ ನೀಡಲಾಯಿತು. ರಕ್ಷಣಾ ಇಲಾಖೆಯ ಸಹಾಯಕ ಸಚಿವ ಸುಭಾಷ್ ಭಾಮ್ರೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರ ಪತ್ನಿ ಬೀನಾ ಭಾಮ್ರೆ ಸಬ್‌ಮರಿನ್‌ಗೆ ಚಾಲನೆ ನೀಡಿದರು. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಉಪಸ್ಥಿತರಿದ್ದರು.