ಮರಕ್ಕೆ ಓಮ್ನಿ ಢಿಕ್ಕಿ: ಓರ್ವ ಸಾವು
Update: 2017-01-14 18:32 IST
ಮೂಡಿಗೆರೆ, ಜ.14: ಓಮ್ನಿ ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ವೃದ್ದ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವರಿಗೆ ಕಾಲಿಗೆ ಗಂಭೀರ ಗಾಯವಾಗಿರುವ ಘಟನೆ ಪಟ್ಟಣದ ಸಮೀಪದ ಬಿದರಹಳ್ಳಿ ಬಳಿ ಬಸ್ ಚೊಳ್ಳಕೆರೆ ಗೇಟ್ ಬಳಿ ಶನಿವಾರ ನಡೆದಿದೆ.
ಅಪಘಾತದಲ್ಲಿ ಮಗ್ರಹಳ್ಳಿ ಗ್ರಾಮದ ಕಾಫಿ ಬೆಳೆಗಾರ ಲಕ್ಷ್ಮಣ್‌ಗೌಡ (65) ಮೃತಪಟ್ಟವರಾಗಿದ್ದು, ಅವರ ಪುತ್ರ ಯೋಗೇಶ್ (40) ಅವರಿಗೆ ಕಾಲಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಲಕ್ಷ್ಮಣ್‌ಗೌಡ ಮತ್ತು ಅವರ ಪುತ್ರ ಯೋಗೇಶ್ ಮುಗ್ರಹಳ್ಳಿಯಿಂದ ಓಮ್ನಿ ಕಾರಿನಲ್ಲಿ ಮೂಡಿಗೆರೆಗೆ ಬರುವ ಸಂದರ್ಭದಲ್ಲಿ ಬಿದರಹಳ್ಳಿ ಬಸ್ ಡಿಪೂ ಬಳಿ ಚೊಳ್ಳಕೆರೆ ಗೇಟ್ ಪಕ್ಕದ ಮರವೊಂದಕ್ಕೆ ಢಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.