ಕೂಡಲ ಸಂಗಮಕ್ಕೆ ತ್ರಿಪುರಾ ಸಿಎಂ ಮಾಣಿಕ್ ಸರ್ಕಾರ್ ಆಗಮನ
Update: 2017-01-15 14:37 IST
ಬಾಗಲಕೋಟೆ, ಜ.15: ಜಿಲ್ಲೆಯ ಕೂಡಲ ಸಂಗಮ ಪಂಚಮಸಾಲಿ ಮಠದ ವತಿಯಿಂದ ರವಿವಾರ ಹಮ್ಮಿಕೊಂಡಿರುವ 2017ರ ಬಸವ ಕೃಷಿ ಪ್ರಶಸ್ತಿಗೆ ಭಾಜನರಾಗಿರುವ ತ್ರಿಪುರಾ ರಾಜ್ಯದ ಸಿಎಂ ಮಾಣಿಕ್ ಸಕಾ೯ರ್ ಇಂದು ಬಾಗಲಕೋಟೆಗೆ ಆಗಮಿಸಿದರು.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲ ಸಂಗಮ ಪಂಚಮಸಾಲಿ ಮಠದಲ್ಲಿ ಇಂದು ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ತ್ರಿಪುರಾ ಮಾಣಿಕ್ ಸಕಾ೯ರ್ ಪಾಲ್ಗೊಳ್ಳಲಿದ್ದು, ಅವರಿಗೆ ಮಠದ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಬಸವ ಕೃಷಿ ಪ್ರಶಸ್ತಿ ನೀಡಿ ಸನ್ಮಾನಿಸಲಿದ್ದಾರೆ.