×
Ad

ಮಂತ್ರಿಮಾಲ್ ಗೋಡೆ ಕುಸಿತ ;ಇಬ್ಬರಿಗೆ ಗಂಭೀರ ಗಾಯ

Update: 2017-01-16 17:06 IST

ಬೆಂಗಳೂರು,ಜ.16: ನಗರದ  ಮಲ್ಲೇಶ್ವರಂನಲ್ಲಿರುವ ಪ್ರತಿಷ್ಠಿತ ಮಂತ್ರಿಮಾಲ್ ನ ಹಿಂಭಾಗದ ಗೋಡೆ ಕುಸಿದ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡಿರುವ ಘಟನೆ  ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಗಾಯಗೊಂಡಿರುವ ಇಬ್ಬರು ಮಹಿಳೆಯರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮುನ್ನೆಚ್ಚರಿಕಾ ಕ್ರಮವಾಗಿ ಮಾಲ್ ನಿಂದ ಎಲ್ಲಾ ಜನರನ್ನು ತೆರವುಗೊಳಿಸಲಾಗಿದೆ ಮತ್ತು ಚಿತ್ರ ಪ್ರದರ್ಶನ ಸಹ ಸ್ಥಗಿತಗೊಳಿಸಲಾಗಿದೆ. ಮೂರನೆ ಹಾಗೂ ನಾಲ್ಕನೆ ಮಹಡಿಯ ಗೋಡೆ ಬಿರುಕು ಬಿಟ್ಟಿದ್ದು, ಮಂತ್ರಿಮಾಲ್ ಬಂದ್ ಆಗಿದೆ.

ಮಂತ್ರಿಮಾಲ್ ನ ಗೋಡೆ ಕುಸಿತದಿಂದ ಎಸಿ ಪೈಪ್ ತುಂಡಾಗಿ 1ರಿಂದ 3ನೇ ಮಹಡಿಯವರೆಗೆ ನೀರು ತುಂಬಿಕೊಂಡಿದೆ.

ಮಂತ್ರಿಮಾಲ್ ಪಕ್ಕದ ಕಟ್ಟಡದ ಎರಡು ಗೋಡೆಗಳು ಬಿರುಕು ಬಿಟ್ಟಿದೆ ಎಂದು ತಿಳಿದು ಬಂದಿದೆ.ಮೇಯರ್ ಜಿ.ಪದ್ಮಾವತಿ, ಶಾಸಕ ದಿನೇಶ್ ಗುಂಡೂರಾವ್ ಸ್ಥಳಕ್ಕೆ ಧಾವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News