ಬೆಂಗಳೂರು ವಿಶ್ವದಲ್ಲೇ ನಂಬರ್ ಒನ್

Update: 2017-01-18 08:51 GMT

ಬೆಂಗಳೂರು, ಜ.18: ನಮ್ಮ ಬೆಂಗಳೂರು ವಿಶ್ವದಲ್ಲಿಯೇ ಅತ್ಯಂತ ಡೈನಾಮಿಕ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಅಮೆರಿಕದ ಸಿಲಿಕಾನ್ ವ್ಯಾಲಿಯನ್ನು ಹಿಂದಿಕ್ಕಿದೆ. ಬೆಂಗಳೂರಿಗೆ ಈ ಅಗ್ರಸ್ಥಾನ ನೀಡಿದ ಜೆಎಲ್‌ಎಲ್ 2017 ಸಿಟಿ ಮೊಮೆಂಟಮ್ ಇಂಡೆಕ್ಸ್ ಅನ್ನು ವರ್ಲ್ಡ್ ಇಕನಾಮಿಕ್ ಫೋರಂ ಕೂಡ ಸಹಮತ ವ್ಯಕ್ತಪಡಿಸಿದೆ.

ಈ ಸಮೀಕ್ಷೆಯನ್ವಯ ವಿಶ್ವದ ಅತ್ಯಂತ ವೇಗವಾಗಿ ಬದಲಾಗುತ್ತಿರುವ ನಗರಗಳ ಪೈಕಿ ಟಾಪ್ 30ರಲ್ಲಿ 6 ನಗರಗಳು ಭಾರತದಲ್ಲಿವೆಯೆಂದು ಹೇಳಲಾಗಿದೆ. ಈ ಮೂಲಕ ಈ ನಿಟ್ಟಿನಲ್ಲಿ ಅಗ್ರಸ್ಥಾನವನ್ನು ಭಾರತವು ಚೀನಾದ ಕೈಯಿಂದ ಕಸಿದುಕೊಂಡಿದೆ.

ವಿಶ್ವದ ಅತ್ಯಂತ ಡೈನಾಮಿಕ್ ನಗರಗಳ ಪಟ್ಟಿಯಲ್ಲಿ ಬೆಂಗಳೂರಿನ ನಂತರದ ಸ್ಥಾನ ವಿಯೆಟ್ನಾಂನ ಹೋ ಚಿ ಮಿನ್ಹ್ ನಗರಕ್ಕೆ ಹೋದರೆ, ಸಿಲಿಕಾನ್ ಸಿಟಿ ಮೂರನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಐದನೆ ಸ್ಥಾನ ಹೈದರಾಬಾದ್ ನಗರಕ್ಕೆ ಹೋದರೆ, ಪುಣೆ ನಗರ 13ನೆ ಸ್ಥಾನ ಪಡೆದು ನ್ಯೂಯಾರ್ಕ್, ಪ್ಯಾರಿಸ್ ನಗರಗಳನ್ನು ಹಿಂದಿಕ್ಕಿದೆ. ಚೆನ್ನೈ 18ನೆ ಸ್ಥಾನ ಪಡೆದು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ನಗರವನ್ನು ಹಿಂದಿಕ್ಕಿದೆ. ದಿಲ್ಲಿ ಹಾಗೂ ಮುಂಬೈ ನಗರಗಳು 23 ಹಾಗೂ 25ನೆ ಸ್ಥಾನ ಪಡೆದು ಲಾಸ್ ಏಂಜಲಿಸ್ ಹಾಗೂ ಸ್ಟಾಕ್ ಹೋಂಗಿಂತ ಮುಂದಿವೆ.

ತಾಂತ್ರಿಕ ಅಭಿವೃದ್ಧಿ, ಹೊಸ ಅನ್ವೇಷಣೆ ಹಾಗೂ ಈ ನಿಟ್ಟಿನಲ್ಲಿ ಬೇಗನೇ ಹೊಂದಿಕೊಳ್ಳುವ ನಗರಗಳನ್ನು ಆಯ್ದು ಈ ರ್ಯಾಂಕಿಂಗ್ ನೀಡಲಾಗಿದೆ. ತಂತ್ರಜ್ಞಾನ ಹೊರತು ಪಡಿಸಿ, ಜನಜೀವನಕ್ಕೆ ಅಗತ್ಯ ಸೌಲಭ್ಯ, ಲಭ್ಯ ಸ್ಥಳ, ಪರಿಸರ ಹಾಗೂ ಗೃಹ ಸೌಲಭ್ಯಗಳನ್ನು ಮಾತ್ರವಲ್ಲದೆ ರಾಷ್ಟ್ರೀಯತೆಯ ಭಾವನೆ, ಸುರಕ್ಷತೆ ಮುಂತಾದ ವಿಚಾರಗಳನ್ನೂ ಈ ರ್ಯಾಂಕಿಂಗ್ ನೀಡುವಾಗ ಪರಿಗಣಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News