×
Ad

​ಬಿಜೆಪಿ ಕಾರ್ಯಕರ್ತರಿಂದ ಶಾಂತಿ ಮಂತ್ರದ ಜಪ

Update: 2017-01-18 23:03 IST

ಆರೋಪ-ಪ್ರತ್ಯಾರೋಪಗಳ ಕಡಿವಾಣಕ್ಕೆ ಸೂಚನೆ
ಬಿ. ರೇಣುಕೇಶ್
ಶಿವಮೊಗ್ಗ, ಜ. 18: ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಬಂಧಿಸಿದಂತೆ ಬಿ.ಎಸ್. ಯಡಿಯೂರಪ್ಪಹಾಗೂ ಕೆ.ಎಸ್.ಈಶ್ವರಪ್ಪನಡುವೆ ನಡೆಯುತ್ತಿರುವ ಸಮರ ಅವರಿಬ್ಬರ ತವರೂರು ಶಿವಮೊಗ್ಗ ನಗರದಲ್ಲಿ ಅಕ್ಷರಶಃ ಕದನ ಸ್ವರೂಪ ಪಡೆದುಕೊಂಡು, ಬಿಜೆಪಿಯಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಭಿನ್ನಮತ ಭುಗಿಲೇಳುವಂತೆ ಮಾಡಿದೆ.


ಸತತ ಕಳೆದೆರೆಡು ದಿನಗಳಿಂದ ನಗರದ ಜ್ಯೂವೆಲ್‌ರಾಕ್ ಹೊಟೇಲ್ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯು ಬಿಎಸ್‌ವೈ ಮತ್ತು ಈಶ್ವರಪ್ಪ ಬೆಂಬಲಿಗರ ಕದನ ಕಣವಾಗಿ ಪರಿವರ್ತ ನೆಗೊಂಡಿತು. ಮುಖಂಡರ ನಡುವೆ ಆರೋಪ- ಪ್ರತ್ಯಾರೋಪ, ಕಾರ್ಯಕರ್ತರ ನಡುವೆ ಕೈ ಕೈ ಮಿಲಾವಣೆ, ಗದ್ದಲ-ಗೊಂದಲ ಸೇರಿದಂತೆ ಕಾವೇರಿದ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು. ಆದರೆ, ಬುಧವಾರ ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಶಾಂತ ಪರಿಸ್ಥಿತಿ ಕಂಡು ಬಂದಿತು. ಸೋಮವಾರ ಹಾಗೂ ಮಂಗಳವಾರದಂದು ಕಚೇರಿಯಲ್ಲಿ ಕಂಡುಬಂದ ಮುಖಂಡರು, ಕಾರ್ಯಕರ್ತರ ದಟ್ಟಣೆ ಬುಧವಾರ ಕಂಡುಬರಲಿಲ್ಲ.

ಚಾಟಿ!: ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖಂಡರ ಮಾತಿನ ಚಕಮಕಿ ಹಾಗೂ ಮಂಗಳವಾರ ನಡೆದ ಕಾರ್ಯಕರ್ತರ ಘರ್ಷಣೆಯ ಬಗ್ಗೆ ರಾಜ್ಯದ ಕೆಲ ಬಿಜೆಪಿ ಹಾಗೂ ಸಂಘ ಪರಿವಾರದ ಹಿರಿಯ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕೆಲ ಜಿಲ್ಲಾ ಮುಖಂಡರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದು ಕೊಂಡಿದ್ದಾರೆ. ತಕ್ಷಣವೇ ಭಿನ್ನಮತೀಯ ಚಟುವಟಿಕೆಗೆ ಪೂರ್ಣ ವಿರಾಮ ಹಾಕುವಂತೆ ಹಾಗೂ ಬಹಿರಂಗವಾಗಿ ಪತ್ರಿಕೆಗಳಿಗೆ ಹೇಳಿಕೆ ನೀಡದಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಬಿ.ಎಸ್.ವೈ ಮತ್ತು ಈಶ್ವರಪ್ಪಬೆಂಬಲಿತ ಎರಡೂ ಬಣಗಳು ಇದೀಗ ಕದನ ವಿರಾಮ ಘೋಷಿಸಿದ್ದಾರೆ.! ಇನ್ನು ಮುಂದೆ ಬಹಿರಂಗವಾಗಿ ಅಥವಾ ಮಾಧ್ಯಮಗಳ ಮುಂದೆ ಪರಸ್ಪರ ಆರೋಪ - ಪ್ರತ್ಯಾರೋಪಗಳಿಗೆ ಪೂರ್ಣ ಪ್ರಮಾಣದಲ್ಲಿ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ. ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವ ತೀರ್ಮಾನ ಮಾಡಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.


ಈ ನಿಟ್ಟಿನಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡರು ಅಸಮಾಧಾನಿತ ಮುಖಂಡರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ಬಹಿರಂಗ ಕಲಹಕ್ಕೆ ಆಸ್ಪದವಾಗದಂತೆ ಎಚ್ಚರವಹಿಸುವಂತೆ ಮುಖಂಡರಿಗೆ ಸೂಚನೆ ನೀಡುತ್ತಿದ್ದಾರೆ. ಮತ್ತೊಂದೆಡೆ ಶಿಕಾರಿಪುರದ ಶಾಸಕ ಬಿ.ವೈ.ರಾಘವೇಂದ್ರ ಅವರು ಬುಧವಾರ ಶಿವಮೊಗ್ಗ ನಗರಕ್ಕೆ ಆಗಮಿಸಿ ಕೆಲ ಮುಖಂಡರ ಜೊತೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಒಳ ಬೇಗುದಿ: ಇದೆಲ್ಲದರ ನಡುವೆಯೂ, ಯಡಿಯೂರಪ್ಪಹಾಗೂ ಈಶ್ವರಪ್ಪಬಣದ ಕೆಲ ಬೆಂಬಲಿಗರಲ್ಲಿ ಒಳಬೇಗುದಿ ಮುಂದುವರಿದಿದೆ.

ಎರಡೂ ಬಣಗಳ ಕೆಲ 
ಮುಖಂಡರು ತಮ್ಮ ಸಮರ್ಥ ಕರೊಂದಿಗೆ ಗುಪ್ತ ಮಾತುಕತೆಯಲ್ಲಿ ತೊಡಗಿದ್ದು, ಮುಂದೆ ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ‘ಮೆೀಲ್ನೋಟಕ್ಕೆ ಎಲ್ಲವೂ ಶಾಂತವಾಗಿರುವ ರೀತಿಯಲ್ಲಿ ಕಂಡುಬರುತ್ತಿದೆಯಷ್ಟೆ. ಆದರೆ ಒಳಗೊಳಗೆ ಎರಡೂ ಕಡೆಗಳಲ್ಲಿ ಗುಪ್ತ ಕಾರ್ಯತಂತ್ರಗಳು ನಡೆಯುತ್ತಿವೆ. ಎಲ್ಲಿಯವರೆಗೊ ಯಡಿಯೂರಪ್ಪ- ಈಶ್ವರಪ್ಪ ನಡುವೆ ನಡೆಯುತ್ತಿರುವ ಕಲಹ ಶಮನವಾಗುವುದಿಲ್ಲವೋ, ಅಲ್ಲಿಯ ವರೆಗೂ ಜಿಲ್ಲಾ ಘಟಕದಲ್ಲಿ ತಲೆದೋರಿರುವ ಗೊಂದಲವೂ ಕಡಿಮೆಯಾಗುವುದಿಲ್ಲ. ಎಲ್ಲವೂ ಸರಿಯಿದೆ ಎಂದು ಪಕ್ಷದ ಹಿರಿಯ ನಾಯಕರು ಬಹಿರಂಗವಾಗಿ ಹೇಳಿದರೂ, ಒಳಗೊಳಗೆ ಗುಪ್ತ ಕಾರ್ಯ ತಂತ್ರಗಳನ್ನು ಕೆಲ ಮುಖಂಡರು ನಡೆ
 ಸುಳ್ಳಲ್ಲ’ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ಹೇಳುತ್ತಾರೆ. ನಿರ್ಧಾರವೇನು?: ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಬಂಧಿಸಿದಂತೆ ಯಡಿಯೂರಪ್ಪಅವರ ವಿರುದ್ಧ ಜಿಲ್ಲೆಯವರೇ ಆದ ಪಕ್ಷದ ರಾಜ್ಯ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್ ಹಾಗೂ ಗಿರೀಶ್ ಪಟೇಲ್ ತೊಡೆ ತಟ್ಟಿ ನಿಂತಿದ್ದು, ಈಶ್ವರಪ್ಪಪರವಾಗಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಬಿಎಸ್‌ವೈ ಜ.19ರಂದು ಈ ನಾಯಕರ ಸಭೆ ಕರೆದಿದ್ದು, ಅಲ್ಲಿ ಈ ಇಬ್ಬರು ಮುಖಂಡರು ಯಾವ ರೀತಿಯ ಅಭಿಪ್ರಾಯ ತಳೆಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಮುಖಂಡರ ಮನೆಗಳಿಗೆ ತೆರಳಿ ಮನವೊಲಿಕೆ ಯತ್ನ...!
ಪ್ರಸ್ತುತ ಬಿಜೆಪಿಯಲ್ಲಿ ಬಿ.ಎಸ್
.ಯಡಿಯೂ ರಪ್ಪಹಾಗೂ ಕೆ.ಎಸ್.ಈಶ್ವರಪ್ಪ ಬಣಗಳು ಸೃಷ್ಟಿಯಾಗಿದ್ದು, ಕೆಲ ಮುಖಂಡರು ಒಬ್ಬರನ್ನೊಬ್ಬರು ನೋಡದ ಮಟ್ಟಕ್ಕೆ ದ್ವೇಷ ಸಾಧಿಸಲಾರಂಭಿಸಿದ್ದಾರೆ. ಈ ನಡುವೆ ಯಾವುದೇ ಬಣದಲ್ಲಿಯೂ ಗುರುತಿ ಸಿಕೊಳ್ಳದ ಪಕ್ಷದ ನಾಯಕರು ಎರಡೂ ಬಣಗಳ ಮುಖಂಡರ ಮನವೊಲಿಕೆಯ ಯತ್ನ ನಡೆಸುತ್ತಿದ್ದಾರೆ. ಮುಖಂಡರ ಮನೆಗಳಿಗೆ ತೆರಳಿ ಮಾತುಕತೆ ನಡೆಸುತ್ತಿರುವ ಮಾಹಿತಿಗಳೂ ಕೇಳಿಬರುತ್ತಿವೆ. ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿಯವರ ಪುತ್ರ, ಡಿ.ಎಸ್. ಅರುಣ್, ಸಾಗರದ ಮುಖಂಡ ಟಿ.ಡಿ. ಮೇಘರಾಜ್ ಮೊದಲಾ ದವರು ಬುಧವಾರ ಪಕ್ಷದ ಕೆಲ ಮುಖಂಡರ ಮನೆಗೆ ತೆರಳಿ ಸಂಧಾನ ಮಾತುಕತೆ ನಡೆಸುತ್ತಿದ್ದಾರೆ. ಈ ಮೂಲಕ ಎರಡೂ ಬಣಗಳ ಮುಖಂಡರನ್ನು ಒಂದು ಗೂಡಿಸುವ ಕೆಲಸವನ್ನು ಈ ಯುವ ನಾಯಕರು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News