ಅಗ್ನಿ ದುರಂತದಿಂದ ನಲುಗಿದ ಕುಟುಂಬಗಳಿಗೆ ನೆರವು
Update: 2017-01-20 12:45 IST
ಮುಂಡಗೋಡ, ಜ.20: ತಾಲೂಕಿನ ಸಿಂಗನಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಅಗ್ನಿ ಅನಾಹುತದಿಂದ ಒಂದೇ ಕುಟುಂಬದ ನಾಲ್ಕು ಮನೆಗಳು ಸುಟ್ಟು ಲಕ್ಷಾಂತರ ರೂಪಾಯಿ ಹಾನಿ ಅನುಭವಿಸಿದ ನಿರಾಶ್ರಿತ ಕುಟುಂಬಗಳಿಗೆ ಸಾಂತ್ವನ ಹೇಳಿ ತಮ್ಮ ಸ್ವಂತ ಹಣದಲ್ಲಿ ಅಡುಗೆ ಪಾತ್ರೆ, ಬಟ್ಟೆ ಮುಂತಾದ ಗೃಹ ಬಳಕೆ ವಸ್ತುಗಳನ್ನು ತಾಲೂಕು ಗುತ್ತಿಗೆದಾರ ಸಂಘದ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ಹಾಗೂ ಜಿ.ಪಂ ಸದಸ್ಯೆ ಜಯಮ್ಮ ಕೃಷ್ಣ ಹಿರೇಹಳ್ಳಿ ವಿತರಿಸಿ ಸಂತ್ರಸ್ಥ ಕುಟುಂಗಳಿಗೆ ನೆರವಾದರು.