ಇಂದು ನವೀಕೃತ ಅರ್ಬನ್ ಬ್ಯಾಂಕ್ ಮುಖ್ಯ ಶಾಖೆ ಕಟ್ಟಡ ಉದ್ಘಾಟನೆ
ಭಟ್ಕಳ,ಜ.20: ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಅರ್ಬನ್ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಭಟ್ಕಳದ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಮುಖ್ಯ ಶಾಖೆಯ ಕಟ್ಟಡವು ಆಲ್ಕೋ ಪೆನೆಲಿಂಗ್ ವಿನ್ಯಾಸದೊಂದಿಗೆ ನವೀಕೃತಗೊಂಡಿದ್ದು, ಜ.21ರಂದು ಸಂಜೆ 4:00 ಗಂಟೆಗೆ ಶಾಸಕ ಮಾಂಕಾಳ್ ವೈದ್ಯ ಉದ್ಘಾಟಿಸಲಿದ್ದಾರೆ.
ಮುಂಬೈನ ಇನ್ಫ್ರಾಟೆಕ್ನೋಲಜಿಯ ಅಧ್ಯಕ್ಷ ಮಣಿಂದರ್ ಸಿಂಗ್ ರುಪೇ ಡೆಬಿಟ್ ಕಾರ್ಡ್‌ನ್ನು ಬಿಡುಗಡೆಗೊಳಿಸಲಿದ್ದಾರೆ. ಗ್ರಾಹಕರಿಗೆ ತ್ವರಿತ ಹಾಗೂ ದಕ್ಷ ಸೇವೆಯನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ಈ ಬ್ಯಾಂಕ್ ಐಎಸ್‌ಒ 9001:2015 ಪ್ರಮಾಣ ಪತ್ರವನ್ನು ಹೊಂದಿದ್ದು, ಉ.ಕ.ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಜೆ.ಎಸ್.ಜಯಪ್ರಕಾಶ ಪ್ರಮಾಣಪತ್ರ ವಿತರಿಸಲಿದ್ದಾರೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ದೃಷ್ಟಿಯಿಂದ ಮುರುಡೇಶ್ವರ ಹಾಗೂ ಗಂಗೊಳ್ಳಿಯಲ್ಲಿ ಅಳವಡಿಸಲಾಗಿರುವ ಎಟಿಎಂ ಯಂತ್ರವನ್ನು ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ ಹಾಗೂ ಹ್ಯಾಂಗೊ ಐಸ್‌ಕ್ರೆಮ್‌ನ ಕಾರ್ಯನಿರ್ವಾಹಕ ನಿರ್ದೇಶಕ ಪ್ರದೀಪ್ ಪೈ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಅಂಜುಮನ್ ಸಂಸ್ಥೆಯ ವಿಶ್ರಾಂತ ಪ್ರಾಂಶುಪಾಲ ಡಾ.ಸೈಯದ್‌ಝಮಿರುಲ್ಲಾ ಶರೀಫ್ ಹಾಗೂ ಮಂಗಳೂರು ವಲಯ ಎಕ್ಸಿಸ್ ಬ್ಯಾಂಕ್ ಉಪಾಧ್ಯಕ್ಷ ಹಾಗೂ ಕ್ಲಸ್ಟರ್ ಮುಖ್ಯಸ್ಥ ಸುರೇಶ್ ಬಿ.ಭಾಗವಹಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಜೀದ್ ಚೌಗುಲೆ ವಹಿಸಲಿದ್ದಾರೆಎಂದು ಪ್ರಧಾನ ವ್ಯವಸ್ಥಾಪಕ ಎಸ್.ಎ.ರಝಾಕ್ ತಿಳಿಸಿದ್ದಾರೆ.