×
Ad

ಪಾನನಿಷೇಧ ಬೆಂಬಲಿಸಿ ಬೃಹತ್ ಮಾನವ ಸರಪಳಿ..!

Update: 2017-01-21 23:50 IST

ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರಕಾರದ ಪಾನನಿಷೇಧ ನೀತಿಯನ್ನು ಬೆಂಬಲಿಸಿ ಶನಿವಾರ ಬಿಹಾರದಾದ್ಯಂತ ನಡೆದ ಬೃಹತ್ ಮಾನವ ಸರಪಳಿ ರಚನೆ ಕಾರ್ಯಕ್ರಮದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್‌ಜೆಡಿ ವರಿಷ್ಠ ಲಾಲುಪ್ರಸಾದ್ ಯಾದವ್ ಮತ್ತು ಸಂಪುಟ ಸಚಿವರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಮೂರು ಕೋಟಿ ಜನರು ಪಾಲ್ಗೊಂಡಿದ್ದರು. 11,000 ಕಿ.ಮೀ.ಗೂ ಉದ್ದದ ಈ ಮಾನವ ಸರಪಳಿ ವಿಶ್ವದಲ್ಲಿಯೇ ಅತ್ಯಂತ ಉದ್ದದ ಮಾನವ ಸರಪಳಿಯಾಗಿದೆ ಎನ್ನಲಾಗಿದೆ. ಒಂದು ವಿದೇಶಿ ಮತ್ತು ಎರಡು ಇಸ್ರೋ ಉಪಗ್ರಹಗಳು, ನಾಲ್ಕು ವಿಮಾನಗಳು, ಎರಡು ಹೆಲಿಕಾಪ್ಟರ್‌ಗಳು ಮತ್ತು 40 ಡ್ರೋನ್‌ಗಳು ಈ ಮಾನವ ಸರಪಳಿಯ ಚಿತ್ರಗಳನ್ನು ಸೆರೆ ಹಿಡಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor