​ಮಹಿಳೆಗೆ ಅಪರಿಚಿತ ವಾಹನ ಢಿಕ್ಕಿ: ಸವಾರ ಪರಾರಿ

Update: 2017-01-23 17:53 GMT

 ಮುಂಡಗೋಡ, ಜ.23: ಅಪರಿಚಿತ ದ್ವಿಚಕ್ರ ವಾಹನವೊಂದು ಮಹಿಳೆಯೋರ್ವಳಿಗೆ ಢಿಕ್ಕಿ ಹೊಡೆದಿರುವುದರಿಂದ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಕಲಘಟಗಿ-ಮುಂಡಗೋಡ ರಸ್ತೆ ಬಳಿಯ ಇಂದೂರ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ


   ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಆಂಧ್ರ ಮೂಲದ ಜಯಮ್ಮ ಓಬಳೇಶ(50) ಎಂದು ಗುರುತಿಸಲಾಗಿದೆ.
ರಸ್ತೆ ಪಕ್ಕದಲ್ಲಿ ಕೇಬಲ್ ಹಾಕುವ ಕೆಲಸದಲ್ಲಿ ನಿರತರಾಗಿದ್ದ ಜಯಮ್ಮಳಿಗೆ ಮುಂಡಗೋಲದ ಕಡೆಗೆ ವಾಹನ ಚಾಲನೆ ಮಾಡಿಕೊಂಡು ಬಂದು ಮಹಿಳೆಗೆ ಢಿಕ್ಕಿಪಡಿಸಿ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದ್ದು, ಇದರಿಂದ ಢಿಕ್ಕಿಯಿಂದ ಮಹಿಳೆಯು ಕಾಲಮುರಿತಕ್ಕೆ ಒಳಗಾಗಿದ್ದಾಳೆ.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News