​ ಸ್ನೇಕ್ ಆರೀಫ್‌ನಿಂದ ಜಾವಳಿಯಲ್ಲಿ 2 ನಾಗರಹಾವು ಸೆರೆ

Update: 2017-01-23 17:53 GMT


ಮೂಡಿಗೆರೆ, ಜ.23: ಜಾವಳಿಯ ದೂರವಾಣಿ ವಿನಿಮಯ ಕೇಂದ್ರದ ಪಕ್ಕದ ಪೊದೆಯೊಳಗೆ ಎರಡು ನಾಗರಹಾವು ಅಡಗಿಕೊಂಡು ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದವು.
ಈ ವಿಚಾರ ತಿಳಿದ ಬಣಕಲ್ ಸ್ನೇಕ್ ಆರೀಫ್ ಜಾವಳಿಗೆ ತೆರಳಿ 8 ಅಡಿ ಉದ್ದದ 2 ಹಾವುಗಳನ್ನು ರಂದ್ರವನ್ನು ಕೊರೆದು ಸೆರೆ ಹಿಡಿದು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ ಎಂದು ಜಾವಳಿ ದೂರವಾಣಿ ಕೇಂದ್ರದ ಸಿಬ್ಬಂದಿ ಬೀರೇಗೌಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News