ಪ್ರಿಯಾ ರವಿಕುಮಾರ್‌ಗೆ ಗೌರವ ಡಾಕ್ಟರೇಟ್
Update: 2017-01-24 22:53 IST
ಮಡಿಕೇರಿ, ಜ.24: ಮೂರ್ನಾಡು ವಿದ್ಯಾ ಸಂಸ್ಥೆಯ ಪದವಿ ಕಾಲೇಜಿನ ಪ್ರಾಂಶುಪಾಲೆ ಸಿ.ಜೆ.ಪ್ರಿಯಾ ಅವರಿಗೆ ಕೊಯಮತ್ತೂರು ಭಾರತೀಯ ವಿಶ್ವ ವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ವಾಣಿಜ್ಯ ವಿಭಾಗದಲ್ಲಿ ‘ಕಸ್ಟಮರ್ ರಿಲೇಷನ್‌ಶಿಪ್ ಮ್ಯಾನೇಜ್‌ಮೆಂಟ್ ಸ್ಟಾರ್ಟಜೀಸ್ ಫಾಲೋಡ್ ಇನ್ ಸೆಲೆಕ್ಟ್ ಬ್ಯಾಂಕ್’ ವಿಷಯದ ಕುರಿತು ಅಧ್ಯಯನ ನಡೆಸಿ ಮಂಡಿಸಿದ ಮಹಾಪ್ರಬಂಧಕ್ಕೆ ಪ್ರಿಯಾ ಅವರಿಗೆ ಕೊಯಮತ್ತೂರು ಭಾರತೀಯ ವಿಶ್ವ ವಿದ್ಯಾನಿಲಯ ಪಿಎಚ್‌ಡಿ ಪುರಸ್ಕಾರ ನೀಡಿ ಗೌರವಿಸಿದೆ.
ಸಿ.ಜೆ.ಪ್ರಿಯಾ ಅವರು ಮಡಿಕೇರಿಯ ಗೌಳಿಬೀದಿಯ ನಿವಾಸಿ ಕೊಡಗು ಚಾನೆಲ್‌ನ ನಿರ್ದೇಶಕ ಜಿ.ವಿ. ರವಿಕುಮಾರ್ ಅವರ ಪತ್ನಿ.