×
Ad

​ಹಾವು ಕಡಿದು ಮಹಿಳೆ ಮೃತ್ಯು

Update: 2017-01-24 22:59 IST

ಮೂಡಿಗೆರೆ, ಜ.24: ಬಣಕಲ್‌ನ ಕೆಂಬಲ್‌ಮಠ ಗ್ರಾಮದಲ್ಲಿ ಮನೆಯ ಕೊಟ್ಟಿಗೆಯಲ್ಲಿ ಉರುವಲು ತರಲು ತೆರಳಿದ್ದ ಮೀನಾಕ್ಷಿ (35) ಎಂಬವರು ನಾಗರಹಾವು ಕಚ್ಚಿ ಮೃತಪಟ್ಟಿದ್ದಾರೆ.


ಮೀನಾಕ್ಷಿ ಚಿಕ್ಕಮಗಳೂರಿನ ಮಲ್ಲಂದೂರು ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆ ಚೇತನ ನರ್ಸಿಂಗ್ ಹೋಮ್‌ನಲ್ಲಿ 7 ವರ್ಷಗಳ ಕಾಲ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸಿದ್ದರು.ಬಣಕಲ್‌ನ ಸುದರ್ಶನ್ ಎಂಬವರನ್ನು ವಿವಾಹವಾಗಿದ್ದರು.

ಮನೆಯಲ್ಲಿ ಗೃಹಿಣಿಯಾಗಿದ್ದ ಅವರು ಸೌದೆ ಕೊಟ್ಟಿಗೆಯಲ್ಲಿ ಸೌದೆ ತರಲು ಹೋದಾಗ ಕೊಟ್ಟಿಗೆಯಲ್ಲಿದ್ದ ನಾಗರಹಾವು ಕಚ್ಚಿದೆ. ಕೂಡಲೇ ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೂಡಿಗೆರೆ ಎಂಜಿಎಂ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಂದ ಚಿಕ್ಕಮಗಳೂರು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಅವರು ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಮೃತರು ಪತಿ ಸುದರ್ಶನ್ ಹಾಗೂ ಒಂದು ಮಗುವನ್ನು ಅಗಲಿದ್ದಾರೆ.ಇವರ ನಿಧನಕ್ಕೆ ಚೇತನ್ ನರ್ಸಿಂಗ್ ಹೋಮ್‌ನ ವೈದ್ಯರು ಹಾಗೂ ಸಿಬ್ಬಂದಿ ಹಾಗೂ ಕುಟುಂಬದವರು ಮತ್ತು ಗ್ರಾಮಸ್ಥರು ತೀವ್ರ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News