×
Ad

​ಕುಸಿದುಬಿದ್ದು ವಿದ್ಯಾರ್ಥಿ ಸಾವು

Update: 2017-01-24 23:02 IST

ದಾವಣಗೆರೆ, ಜ.24: ನಗರದ ದರಮಾ ವಿಜ್ಞ್ಞಾನ ಕಾಲೇಜಿನಲ್ಲಿ ಕೆಮಿಸ್ಟ್ರಿ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಯೊಬ್ಬ ಹಠಾತ್ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.


 ಹರೀಶ್(21) ಮೃತ ವಿದ್ಯಾರ್ಥಿ. ಮೂಲತಃ ಹಿರೇಕೆರೂರು ತಾಲೂಕಿನ ಹಿರೇಹಡಚಿ ಗ್ರಾಮದ ಹರೀಶ್ ದರಮಾ ಕಾಲೇಜಿನಲ್ಲಿ ಬಿಎಸ್ಸಿ 6ನೆ ಸೆಮಿಸ್ಟರ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.

ಎಂದಿನಂತೆ ಇಂದು ಮಧ್ಯಾಹ್ನ ಪ್ರಯೋಗಾಲಯದಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ದಿಢೀರ್ ಕುಸಿದುಬಿದ್ದಿದ್ದಾನೆ. ತಕ್ಷಣ ಸಹಪಾಠಿಗಳು ಹಾಗೂ ಪ್ರಾಧ್ಯಾಪಕರು ಬಾಪೂಜಿ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆದಲ್ಲಿಯೇ ಹರೀಶ್ ಅಸುನೀಗಿದ್ದಾನೆ ಎನ್ನಲಾಗಿದೆ.

ನಗರದ ಸಿರಿಗೆರೆ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ನಡೆಸುತ್ತಿದ್ದ ವಿದ್ಯಾರ್ಥಿ ಹರೀಶ್ ಓದಿನಲ್ಲೂ ಮುಂದಿದ್ದ. ಈ ಹಿಂದೆ ಯಾವುದೇ ಸಮಸ್ಯೆಯೂ ಕಾಣಿಸಿಕೊಂಡಿರಲಿಲ್ಲ. ಆದರೆ, ಇಂದು ದಿಢೀರ್ ಕುಸಿದು ಬಿದ್ದು ನಿಧನರಾಗಿದ್ದುದು ನೋವು ತಂದಿದೆ ಎಂದು ಸ್ನೇಹಿತ ಭರತ್ ಮತ್ತಿತರರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News