ಪ್ರೀತಿಪ್ರೇಮಕ್ಕೆ ಮನೆಯವರ ಅಡ್ಡಿ ಯುವತಿಯಿಂದ ಆತ್ಮಹತ್ಯೆಗೆ ಯತ್ನ
ಭಟ್ಕಳ,ಜ.24: ಪ್ರೀತಿ ಪ್ರೇಮದ ಕುರಿತಂತೆ ಯುವತಿಗೆ ಮನೆಯವರು ಬುದ್ಧಿವಾದ ಹೇಳಿದ್ದಕ್ಕೆ ತನ್ನ ಪ್ರೀತಿಗೆ ಮನೆಯವರೇ ಅಡ್ಡಿಯಾಗುತ್ತಿದ್ದಾರೆಂದು ಭಾವಿಸಿ ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗ್ರಾಮೀಣ ಪೊಲೀಸ್‌ಠಾಣಾ ವ್ಯಾಪ್ತಿಯ ಮಾವಿನಕುರ್ವೆ ಗ್ರಾಪಂ ಬೆಳ್ನಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ತಾನು ಧರಿಸಿದ್ದ ಸೀರೆಯಿಂದಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ತೀವ್ರವಾಗಿ ಅಸ್ವಸ್ಥಗೊಂಡಿದ್ದು,ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದುಕೊಂಡು ಹೋಗಿದ್ದಾಗಿ ತಿಳಿದುಬಂದಿದೆ. ಗ್ರಾಮೀಣ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೀರಾ ಬಾಯಿ ಅವರಿಗೆ ಆರು ಮಂದಿ ಪುತ್ರರಿದ್ದು, ಅರುಣ್ ಕುಮಾರ್ ಅವರನ್ನು ಹೊರತುಪಡಿಸಿ ಉಳಿದವರೆಲ್ಲ ಬೇರೆ ಬೇರೆ ಊರುಗಳಲ್ಲಿ ವಾಸವಾಗಿದ್ದಾರೆ. ಅವರೆಲ್ಲರೂ ಆಗಾಗ ಕರೆ ಮಾಡುತ್ತಿದ್ದು, ಶ್ರವಣ ಶಕ್ತಿಯ ಕೊರತೆಯಿಂದ ಮಕ್ಕಳ ಮಾತು ಆಲಿಸಲಾಗದೆ ಬೇಸರದಲ್ಲಿದ್ದರು ಎನ್ನಲಾಗಿದೆ. ಜೊತೆಗೆ ವಯೋಸಹಜ ಅನಾರೋಗ್ಯವೂ ಕಾಡುತ್ತಿತ್ತು.