×
Ad

​ಲಾರಿ-ಬೊಲೆರೊ ಢಿಕ್ಕಿ: ಚಾಲಕ ಗಂಭೀರ

Update: 2017-01-24 23:10 IST

ಮುಂಡಗೋಡ,ಜ.24: ಲಾರಿ ಹಾಗೂ ಬೊಲೆರೊ ವಾಹನದ ಮಧ್ಯೆ ಢಿಕ್ಕಿ ಸಂಭವಿಸಿ ಬೊಲೆರೊ ಚಾಲಕ ಗಂಭೀರವಾಗಿ ಗಾಯಗೊಂಡು ಘಟನೆ ತಾಲೂಕಿನ ಹುಬ್ಬಳ್ಳಿ-ಶಿರಸಿ ರಸ್ತೆ ಸಿಂಗ್ನಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಗಂಭೀರವಾಗಿ ಗಾಯಗೊಂಡ ಚಾಲಕನನ್ನು ಸವದತ್ತಿ ತಾಲೂಕಿನ ಸುರೇಶ ಮೊರಬದ ಎಂದು ಹೇಳಲಾಗಿದೆ.
 ಗಾಯಗೊಂಡ ಬೊಲೆರೊ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ವತ್ರೆಗೆ ದಾಖಲಿಸಲಾಗಿದೆ.
  ಈ ಕುರಿತು ಮುಂಡಗೋಡ ಪಿಎಸ್ಸೈ ಲಕ್ಕಪ್ಪ ನಾಯಕ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News