ಅಕ್ರಮ ಮರಳು ಸಾಗಣೆ: ವಾಹನಗಳ ವಶ
Update: 2017-01-27 23:09 IST
ಶಿವಮೊಗ್ಗ, ಜ.27: ಜಿಲ್ಲೆಯ ಭದ್ರಾವತಿ ತಾಲೂಕಿನ ತಡಸ ಮತ್ತು ದಡಮಘಟ್ಟ ಸಮೀಪದ ಭದ್ರಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದವರ ಮೇಲೆ ಜಿಲ್ಲಾ ಅಪರಾಧ ದಳ (ಡಿ.ಸಿ.ಬಿ.) ಪೊಲೀಸರು ದಾಳಿ ನಡೆಸಿದ ಘಟನೆ ಶುಕ್ರವಾರ ನಡೆದಿದೆ. ದಾಳಿಯ ವೇಳೆ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ಆರೋಪಿಗಳು ಪರಾರಿಯಾಗಿದ್ದಾರೆ.
5 ಟಿಪ್ಪರ್, 2 ಬೈಕ್ ಹಾಗೂ 10 ರಿಂದ 15 ಲೋಡ್ ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.