×
Ad

ಚಾರ್ಮಾಡಿ ಘಾಟಿಯಲ್ಲಿ ಮೃತದೇಹ ಪತ್ತೆ: ಆತ್ಮಹತ್ಯೆಯ ಶಂಕೆ

Update: 2017-01-27 23:12 IST

 ಮೂಡಿಗೆರೆ, ಜ.27: ಬಣಕಲ್ ಠಾಣಾವ್ಯಾಪ್ತಿಯ ಚಾರ್ಮಾಡಿಘಾಟ್‌ನ ಅಣ್ಣಪ್ಪಸ್ವಾಮಿ ದೇವಸ್ಥಾನದ ತುಸು ದೂರದಲ್ಲಿ ಮಧ್ಯ ವಯಸ್ಕನ ಮೃತದೇಹವು ಶುಕ್ರವಾರ ಪತ್ತೆಯಾಗಿದೆ.


ಮೃತನನ್ನು ತರೀಕೆರೆ ಸಮೀಪದ ಕೊರಟಗೆರೆ ಗ್ರಾಮದ ಚಂದ್ರಪ್ಪ(50)ಎಂದು ಗುರುತಿಸಲಾಗಿದೆ. ಈತನ ಶವ ಚಾರ್ಮಾಡಿ ಘಾಟ್‌ನ ಕೊರಕಲಿನಲ್ಲಿ ಪತ್ತೆಯಾಗಿದೆ.ಶವ ದೊರೆತ ಜಾಗದಲ್ಲಿ ವಿಷದ ಬಾಟಲಿ ದೊರೆತಿದೆ ಸಾವಿಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಪೊಲೀಸ್ ತನಿಖೆಯಿಂದ ಮಾತ್ರ ಪ್ರಕರಣ ಬಯಲಾಗಬೇಕಿದೆ. ಸುಮಾರು ನಾಲ್ಕು ದಿನದ ಹಿಂದೆ ಇವರು ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ.ಸ್ಥಳೀಯರು ಮತ್ತು ಪೊಲೀಸರಿಂದ ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಮೂಡಿಗೆರೆ ವೃತ್ತ ನಿರೀಕ್ಷಕ ಜಗದೀಶ್,ಬಣಕಲ್‌ಪಿಎಸ್ಸೈ ಚಂದ್ರಶೇಖರ್,ಎಎಸ್ಸೈ ಶಶಿ,ಮುಖ್ಯ ಪೇದೆ ರುದ್ರೇಶ್,ಯೋಗೇಶ್, ಕಲ್ಲೇಶ್, ಸಮಾಜಸೇವಕ ಪಿಶ್ ಮೋಣು ಮತ್ತಿತರರು ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News