ಮೇವು ತರಲು ಹೋಗಿದ್ದ ವ್ಯಕ್ತಿ ವಿದ್ಯುತ್ ಅವಘಡದಿಂದ ಮೃತ್ಯು
Update: 2017-01-28 13:29 IST
ಮುಂಡಗೋಡ, ಜ.28: ಕುರಿಗೆ ಸೊಪ್ಪು(ಮೇವು) ತರಲು ಹೋಗಿದ್ದ ವ್ಯಕ್ತಿಯೋರ್ವ ವಿದ್ಯುತ್ ಅವಘಡದಿಂದ ಮೃತಪಟ್ಟ ಘಟನೆ ತಾಲೂಕಿನ ಪಾಳಾ ಗ್ರಾಮದ ಹೊಸನಗರದಲ್ಲಿ ಇಂದು ನಡೆದಿದೆ
ಮೃತಪಟ್ಟ ವ್ಯಕ್ತಿಯನ್ನು ಹೊಸನಗರ ನಿವಾಸಿ ಅಬ್ದುಲ್ ರಹ್ಮಾನ್ ಬಕ್ಷು ಸಾಬ್ ಬಾರವಾಲೆ(54) ಎಂದು ಹೇಳಲಾಗಿದೆ
ಕುರಿಯ ಸಮೇತ ಮೇವು ತರಲು ಹೋಗಿದ್ದ ಅಬ್ದುಲ್ ರಹ್ಮಾನ್ ಮರವೊಂದನ್ನು ಹತ್ತಿ ಸೊಪ್ಪುಕಡಿದು ಕೆಳಗೆ ಇಳಿಯುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಕುರಿ ಮಾತ್ರ ಮನೆಗೆ ಧಾವಿಸಿರುವುದರಿಂದ ಸಂಶಯಗೊಂಡ ಮನೆಯವರು ಹುಡುಕಾಡಿದಾಗ ಘಟನೆ ಬೆಳಕಿಗೆ ಬಂದಿದೆ.
ಈ ಕುರಿತು ಘಟನಾ ಸ್ಥಳಕ್ಕೆ ಪಿಎಸ್ಸೈ ಲಕ್ಕಪ್ಪನಾಯಕ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.