ಯುವತಿ ಕಾಣೆ
Update: 2017-01-28 22:54 IST
ಚಿಕ್ಕಮಗಳೂರು, ಜ.28: ಚಿಕ್ಕಮಗಳೂರು ಬಳಿಯ ಕೈಮರ ಎಂಬಲಿ್ಲನ ಕ್ರಿಸ್ಟಿನಾ (17) ಎಂಬ ಯುವತಿ ನಾಪತ್ತೆಯಾಗಿರುವ ಬಗ್ಗೆ ಚಿಕ್ಕಮಗಳೂರು ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಿಮದ ಹೋದವರು ಕಾಣೆಯಾಗಿದ್ದಾರೆ. ದುಂಡು ಮುಖ, ಕಪ್ಪುಮೈ ಬಣ್ಣ, ಕನ್ನಡ ಮತ್ತು ತಮಿಳು ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೊರಟಾಗ ಬಿಳಿ ಬಣ್ಣದ ಟಾಪ್, ಪರ್ಪಲ್ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ 08262-235608, 220588 ಚಿಕ್ಕಮಗಳೂರು ಗ್ರಾಮಾಂತರ ಠಾಣೆಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.