ಶಿವಮೊಗ್ಗ: ಹೊನ್ನೇತಾಳು ಸಹಕಾರಿ ಸಂಘದ ಗೋಲ್‌ಮಾಲ್ ಪ್ರಕರಣ
ಶಿವಮೊಗ್ಗ, ಜ. 28: ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನೇತಾಳು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಡೆದಿರುವ ಕೋಟಿ ಕೋಟಿ ರೂ. ಗೋಲ್‌ಮಾಲ್ ಪ್ರಕರಣದ ಕುರಿತಂತೆ ಕಾಲಮಿತಿಯಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಗಳ ಸಚಿವಾಲಯವು ಸಹಕಾರಿ ಇಲಾಖೆಗೆ ಸೂಚಿಸಿದೆ ಎಂದು ತಿಳಿದುಬಂದಿದೆ.
ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಜರಗಿಸದೆ ಜಾಣ ಮೌನಕ್ಕೆ ಶರಣಾಗಿದ್ದ ಸಹಕಾರಿ ಇಲಾಖೆಯ ಅಧಿಕಾರಿಗಳು ಸಿಎಂ ಸಚಿವಾಲಯವು ವರದಿ ಕೇಳುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದಾರೆ. ಎಲ್ಲಿ ತಮ್ಮ ಕುತ್ತಿಗೆಗೆ ಈ ಹಗರಣ ಸುತ್ತಿಕೊಳ್ಳುವುದೋ ಎಂಬ ಆತಂಕದಿಂದ ಹಗರಣದ ಸಮಗ್ರ ತನಿಖೆ ನಡೆಸಲು ಮುಂದಾಗಿದ್ದಾರೆಂಬ ಮಾಹಿತಿ ಕೇಳಿಬಂದಿದೆ. ಸಹಕಾರಿ ಸಂಘದ ನಿಯಮಗಳ ಪ್ರಕಾರ 1 ಕೋಟಿ ರೂ. ಮೀರಿದ ಹಣಕಾಸು ಅವ್ಯವಹಾರ ಪ್ರಕರಣಗಳನ್ನು ಕ್ರಿಮಿನಲ್ ಮೊಕದ್ದಮೆ ವ್ಯಾಪ್ತಿುಡಿ ತನಿಖೆ ನಡೆಸಲು ಅವಕಾಶವಿದೆ.
ಹೊನ್ನೇತಾಳು ಸಹಕಾರಿ ಸಂಘದಲ್ಲಿ ನಡೆದಿರುವ ಹಣಕಾಸು ಅವ್ಯವಹಾರವು ಬಹು ಕೋಟಿ ರೂ.ಗಳಾಗಿರುವುದರಿಂದ ಸಹಕಾರಿ ಸಂಘಗಳ ನಿಯಮದ ಅನ್ವಯ ಪೊಲೀಸ್ ಇಲಾಖೆ ಅಥವಾ ಇತರ ತನಿಖಾ ಸಂಸ್ಥೆಗಳ ಮೂಲಕ ತನಿಖೆ ನಡೆಸಲು ಸಹಕಾರಿ ಇಲಾಖೆ ಮುಂದಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ
ದಿನಕಳೆದಂತೆ ಹಗರಣವು ಹೊಸ ಸ್ವರೂಪ ಪಡೆದುಕೊಳ್ಳುತ್ತಿರುವುದು ಹಾಗೂ ತನಿಖೆಗೆ ಹೆಚ್ಚುತ್ತಿರುವ ಒತ್ತಡದಿಂದ ಅವ್ಯವಹಾರದಲ್ಲಿ ಭಾಗಿಯಾದವರಲ್ಲಿ ತೀವ್ರ ನಡುಕ ಉಂಟಾಗಿದೆ.
ಮತ್ತೊಂದೆಡೆ ಕೆಲ ಪ್ರಭಾವಿಗಳು ಶತಾಯಗತಾಯ ಹಗರಣ ಮುಚ್ಚಿ ಹಾಕಲು ನಡೆಸುತ್ತಿರುವ ರಾಜಕೀಯ ಒತ್ತಡ ಮುಂದುವರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ನಿರ್ಲಕ್ಷ್ಯ: 2008ನೆ ವಾರ್ಷಿಕ ಸಾಲಿನಿಂದ ಸಂಘದಲ್ಲಿ ಅವ್ಯವಹಾರ ನಡೆದುಕೊಂಡು ಬರುತ್ತಿದೆ. ಈ ಕುರಿತಂತೆ ಸಂಘದ ಆಡಳಿತ ಮಂಡಳಿಯು 2008ರಿಂದ 2016ರವರೆಗಿನ ಆರ್ಥಿಕ ವಹಿವಾಟಿನ ತನಿಖೆ ನಡೆಸಬೇಕು. ಹಾಗೂ ತಪ್ಪಿತಸ್ಥರ ವಿರುದ್ದ ಕ್ರಿಮಿನಲ್ ಮೊಕದ್ದ