​ಇಂದು ನಾನು ಕಾಂಗ್ರೆಸ್ ತ್ಯಜಿಸಿದ್ದೇನೆ : ಎಸ್ .ಎಂ.ಕೃಷ್ಣ

Update: 2017-01-29 07:53 GMT

ಬೆಂಗಳೂರು. ಜ.29:" ಇಂದು ನಾನು ಕಾಂಗ್ರೆಸ್ ತ್ಯಜಿಸಿದ್ದೇನೆ. ರಾಜೀನಾಮೆ ನಿರ್ಧಾರಕ್ಕೆ ನಾನು ಬದ್ದನಾಗಿದ್ದೇನೆ ''ಎಂದು ಮಾಜಿ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ  ಇಂದು ಮಾತನಾಡಿದ ಅವರು "ಸಕ್ರೀಯ ರಾಜಕೀಯದಿಂದ ನಿವೃತ್ತನಾಗುವುದಿಲ್ಲ.ಹಿರಿತನಕ್ಕೆ ಬೆಲೆ ಇಲ್ಲದ ಪಕ್ಷಕ್ಕೆ ಬೆಲೆ ಇರುವುದಿಲ್ಲ. ಈ ಕಾರಣದಿಂದ ಬಹಳ ನೋವಿನಿಂದ ಕಾಂಗ್ರೆಸ್  ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ" ಎಂದು ಕೃಷ್ಣ ಸ್ಪಷ್ಟಪಡಿಸಿದರು.

"ನಿವೃತ್ತಿ ಎನ್ನುವ ಪದ ರಾಜಕಾರಣಿಗಳ  ಪದಕೋಶದಲ್ಲಿಲ್ಲ. ಆದರೆ ಆತ್ಮ ಗೌರವ, ಸ್ವಾಭಿಮಾನದ ಹಿನ್ನೆಲೆಯಲ್ಲಿ ಪಕ್ಯವನ್ನು ತ್ಯಜಿಸಿದ್ದೇನೆ ಎಂದರು. ವಿದೇಶಾಂಗ ಸಚಿವ ಸ್ಥಾನದಿಂದ ತೆಗೆದು ಹಾಕಿದರು. ಆದರೆ ಬಳಿಕ ಬಂದವರು ಏನು ಮಾಡಿದರೆಂದು ಗೊತ್ತಿಲ್ಲ. ರಾಜ್ಯಸಭಾ ಸದಸ್ಯ ಸ್ಥಾನಕ್ಕೂ ನನ್ನನ್ನು ಪರಿಗಣಿಸಲಿಲ್ಲ" ಎಂದು ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.

ನಾನು ಮಾಡದಿರುವುದೇನು ?ಅವರು ಮಾಡಿದ್ದೇನು  ? ಗೊತ್ತಿಲ್ಲ. ಅಷ್ಟಕ್ಕೂ ನನ್ನನ್ನು ಸಚಿವ ಸ್ಥಾನದಿಂದ ತೆಗೆದದ್ದು ಯಾಕೆ ? ಎಂಬ ಪ್ರಶ್ನೆಗೆ ಇನ್ನೂ  ಉತ್ತರ ಸಿಕ್ಕಿಲ್ಲ ಇದು ನನಗೆ ತುಂಬಾ ನೋವುಂಟು ಮಾಡಿದೆ.

ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿದವನು ನಾನು ಎಂದು ಹೇಳುವುದಿಲ್ಲ. ಆದರೆ ಅವರನ್ನು ಸೇರಿಸುವಲ್ಲಿ ನನ್ನ ಸಣ್ಣ ಪ್ರಯತ್ನ ಇದೆ '' ಎಂದರು. 

ನಾನು ರಾಜೀನಾಮೆ ನೀಡಿದ ಬಳಿಕ ಹಲವರು ಕರೆ ಮಾಡಿದರು. ದಿಲ್ಲಿಯಿಂದಲೂ ಪೋನ್ ಮಾಡಿದರು. ಅವರಿಗೆಲ್ಲ ನಾನು ಚಿರಋಣಿಯಾಗಿರುವೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ  ಅವರು ನನಗೆ ಗೌರವ ನೀಡಿದ್ಬದಾರೆ ಅವರ ಬಗ್ಗೆ  ಅಪಾರ ಗೌರವ ಇದೆ. ಅವರ  ಆರೋಗ್ಯದಲ್ಲಿ ಸುಧಾರಣೆಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ'' ಎಂದು ಹೇಳಿದರು.

ಇವತ್ತು ನನ್ನ  ರಾಜಕೀಯ ಜೀವನದ ನೋವಿನ ದಿನ.47 ವರ್ಷಗಳಲ್ಲಿ  ಇದ್ದ ಮನೆಯನ್ನು  ನೋವಿನಿಂದ ಕಾಂಗ್ರೆಸ್ ಪಕ್ಷದಿಂದ ಬಿಟ್ಟು ಹೋಗುತ್ತಿದ್ದೇನೆ. ವಯಸ್ಸು ಪ್ರಾಕೃತಿಕ ನಿಯಮ. ವಯಸ್ಸಿನ ಕಾರಣದಿಂದ ಯಾರನ್ಡೆನೂ ಕಡೆಗಣಿಸುವುದು ಸರಿಯಲ್ಲ. ಪಕ್ಷ ತೊರೆದ ನಿರ್ಧಾದಿಂದ ಹಿಂದಕ್ಕೆ ಸರಿಯುವುದಿಲ್ಲ. ಕಾಲವು ಎಲ್ಲವನ್ನು ನಿರ್ಣಯ ಮಾಡುತ್ತದೆ. ಮುಂದಿನ ರಾಜಕೀಯ ನಡೆಯನ್ನು ಶೀಘ್ರದಲ್ಲೇ ನಿರ್ಧಾರ ಮಾಡುವೆ ಎಂದು ಹೇಳಿದರು.

ಜನಸಮುದಾಯದ ನಾಯಕರು ಬೇಕಾಗಿಲ್ಲ. ಪರಿಸ್ಥಿತಿಯನ್ನು ನಿಯಂತ್ರಿಸುವ ಮ್ಯಾನೇಜರುಗಳು ಇದ್ದರೆ ಸಾಕು ಎಂಬ ಭಾವನೆ ಕಾಂಗ್ರೆಸ್ ನ ನಾಯಕರಿಲ್ಲದೆ ಎಂದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ   ಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News