ಕಾರವಾರ: ರೈಲು ಬೋಗಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ
ಕಾರವಾರ, ಜ.29: ಕೇರಳದ ತ್ರಿವೆಂಡ್ರಮ್‌ನಿಂದ ರಾಜಸ್ಥಾನಕ್ಕೆ ಚಲಿಸುತ್ತಿದ್ದ ರೈಲಿನ ಒಂದು ಬೋಗಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ ಘಟನೆ ತಾಲೂಕಿನ ಶಿರವಾಡದಲ್ಲಿ ನಡೆದಿದೆ. ಮಂಗಳೂರು ಮಾರ್ಗವಾಗಿ ಆಗಮಿಸಿದ ಬಿಕಾನೇರ್ ಎಕ್ಸ್‌ಪ್ರೆಸ್ ರೈಲು ಕಾರವಾರದ ಕೊಂಕಣ ರೈಲ್ವೆ ಮಾರ್ಗದ ಮೂಲಕ ಹಾದು ಹೋಗುವಾಗ ಬೆಂಕಿ ಕಾಣಿಸಿಕೊಂಡಿದೆ. ರೈಲಿನ ಎಸಿ ಬೋಗಿಯ ಜನರೇಟರ್‌ನಲ್ಲಿ ಕಂಡು ಬಂದ ತಾಂತ್ರಿಕ ದೋಷ ದಿಂದಾಗಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. 400 ಪ್ರಯಾಣಿಕರು ಸಂಚರಿಸುತ್ತಿದ್ದ ರೈಲಿನಲ್ಲಿ ಪ್ರಥಮ ದರ್ಜೆ ಸೀಟುಗಳನ್ನು ಪಡೆದವರು ಹೆಚ್ಚಿನ ಪ್ರಮಾಣದಲ್ಲಿದ್ದರು. ನಗರದ ಶಿರವಾಡದ ಕೊಂಕಣ ರೈಲ್ವೆ ನಿಲ್ದಾಣ ಬಳಿ ಆಗಮಿಸುತ್ತಿದ್ದಂತೆ ರೈಲಿನ ಎಸಿ ಬೋಗಿಯಲ್ಲಿ ಹೊಗೆಯಾಡಲು ಪ್ರಾರಂಭವಾಗಿದೆ. ರೈಲ್ವೆಯಲ್ಲಿದ್ದ ಸಿಬ್ಬಂದಿ ಕಾರವಾರ ರೈಲ್ವೆ ನಿಲ್ದಾ ಣದಲ್ಲಿ ತಿಳಿಸಿದ್ದಾರೆ. ಈ ಸಂದಭರ್ದಲ್ಲಿ ರೈಲ್ಲಿನಲ್ಲಿದ್ದ ಪ್ರಯಾಣಿಕರು ಆತಂಕಿತರಾಗಿದ್ದರು. ರೈಲು ಕಾರವಾರದ ನಿಲ್ದಾಣಕ್ಕೆ ಬಂದು ತಲುಪುತ್ತಿದ್ದಂತೆ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾದರು. ಬೆಂಕಿ ತಗಲಿದ ಬೋಗಿಯನ್ನು ಅಲ್ಲಿಯೇ ಬಿಟ್ಟು ಸುಮಾರು ಒಂದು ಗಂಟೆ ತಡವಾಗಿ ತೆರಳುವಂತಾಯಿತು.
ಈ ಸಂದಭರ್ದಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ತಾಂತ್ರಿಕ ವಿಭಾಗದ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಠಾಣಾ ಪೊಲೀಸರು ಪಂಚನಾಮೆ ನಡೆಸಿದ್ದಾರೆ