×
Ad

. ಮಡಿಕೇರಿ: ಎಂ.ಕಾಮ್‌ನಲ್ಲಿ ಅಕ್ಷತಾ ಶೆಟ್ಟಿಗೆ 6ನೆ ರ್ಯಾಂಕ್

Update: 2017-01-29 23:08 IST

ಮಡಿಕೇರಿ, ಜ.29: ಮಂಗಳೂರು ವಿಶ್ವವಿದ್ಯಾನಿಲಯ 2015-16ನೆ ಸಾಲಿನಲ್ಲಿ ನಡೆದ ಪದವಿ ಪರೀಕ್ಷೆಯಲ್ಲಿ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ ಶೆಟ್ಟಿ ಎಂ.ಕಾಮ್‌ನಲ್ಲಿ ಶೇಕಡಾ 77.43ರಷ್ಟು ಅಂಕ ಪಡೆದು 6ನೆ ರ್ಯಾಂಕ್ ಗಳಿಸಿ ಸಾಧನೆಗೈದಿದ್ದಾರೆ.
ಫೆ.4 ರಂದು ಕಾವೇರಿ ಕಾಲೇಜಿನಲ್ಲಿ ನಡೆಯುವ ಕಾಲೇಜ್ ಡೇ ಸಮಾರಂಭದಲ್ಲಿ ಅಕ್ಷತಾ ಶೆಟ್ಟಿ, ಬಿಸಿಎದಲ್ಲಿ 9ನೆ ರ್ಯಾಂಕ್ ಪಡೆದ ಜ್ಯೋತಿ ಜೆ.ನಾಯಕ್ ಮತ್ತು ಬಿಎ ಯಲ್ಲಿ 10ನೆ ರ್ಯಾಂಕ್ ಗಳಿಸಿದ ಎಚ್.ಬಿ. ಅಶ್ವಿನಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News