ಮಹಿಳೆ ನಾಪತ್ತೆ
Update: 2017-01-29 23:13 IST
ಶಿವಮೊಗ್ಗ, ಜ.29: ನಗರದ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಮೇಲಿನ ಹನಸವಾಡಿಯ ಗಗನ್ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಹಾಲಮ್ಮ ಎಂಬ 42 ವರ್ಷದ ಮಹಿಳೆ ಮನೆಯಿಂದ ಡಿ.27, 2016ರಂದು ಸಂತೆಗೆಂದು ಹೊರಗೆ ಹೋದವರು ಇಲ್ಲಿಯವರೆಗೂ ವಾಪಾಸಾಗಿಲ್ಲ. ಈಕೆಯ ಚಹರೆ 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ, ಉಬ್ಬು ಹಲ್ಲು, ಕನ್ನಡ ಭಾಷೆ ಮಾತನಾಡುತ್ತಾರೆ.
ಕೆಂಪು ಬಣ್ಣದ ಸೀರೆ ಕೆಂಪು ಬ್ಲೌಸ್ ಧರಿಸಿರುತ್ತಾರೆ. ಈ ವ್ಯಕ್ತಿಯ ಬಗ್ಗೆ ಸುಳಿವು ದೊರತಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ದೂ. ಸಂ: 08182-261418 ಸಂಪರ್ಕಿಸಿ ಮಾಹಿತಿ ನೀಡುವಂತೆ ಠಾಣಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.