×
Ad

ಮಲೆನಾಡಿನಲ್ಲಿ ಕುಡಿಯುವ ನೀರಿಗೆ ತತ್ವಾರ

Update: 2017-01-30 22:59 IST

ಖಾಲಿ ಕೊಡ ಹಿಡಿದ ಮಹಿಳೆಯರ ಆಕ್ರಂದನ
ಚಿಕ್ಕಮಗಳೂರು,ಜ.30: ಮಲೆನಾಡು ಜಿಲ್ಲೆಯ ವಿವಿಧ ತಾಲೂಕುಗಳ ಬರಗಾಲ ಪೀಡಿತ ಪ್ರದೇಶದಲ್ಲಿ ಸರಿಯಾದ ಸಮಯಕ್ಕೆ ಮಳೆ ಬಾರದಿರುವ ಹಿನ್ನೆಲೆಯಲ್ಲಿ ನೀರಿಗಾಗಿ ತತ್ವಾರ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ನಿತ್ಯ ಹರಿದ್ವರ್ಣದಿಂದ ಕಂಗೊಳಿಸುತ್ತಿದ್ದ ಚಿಕ್ಕಮ ಗಳೂರು, ಮೂಡಿಗೆರೆ, ಕಡೂರು ಮತ್ತು ತರೀಕೆರೆ ತಾಲೂಕುಗಳಲ್ಲಿ ಸಾಮಾನ್ಯ ಜನರು ಹನಿ-ಹನಿ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ತಲೆದೋರಿದೆ. ಪಂಚ ನದಿಗಳಾದ ಹೇಮಾವತಿ, ಯಗಚಿ, ತುಂಗಾ, ಭದ್ರಾ, ಜಪಾವತಿಯಂಥ ಜೀವ ನದಿಗಳ ಉಗಮ ಸ್ಥಾನವಾದ ಮಲೆನಾ ಡಿನಲ್ಲಿ ಕುಡಿಯುವ ನೀರಿಗಾಗಿ ಜನರು ಆಕ್ರಂ ದನ ಎಬ್ಬಿಸುತ್ತಿರುವುದು ದುರದೃಷ್ಟವೇ ಸರಿ.
 ರಾಜ್ಯದಲ್ಲಿ ಈ ಬಾರಿ ಕಂಡು ಕೇಳರಿಯದ ರೀತಿಯಲ್ಲಿ ಭೀಕರ ಬರಗಾಲ ಆವರಿಸಿದೆ. ರಾಜ್ಯದ ಬಹುತೇಕ ಎಲ್ಲಾ ಜಲಾಶಯಗಳು ನೀರಿಲ್ಲದೇ ಬತ್ತಿ ಬರಿದಾಗತೊಡಗಿವೆ. ರೈತಾಪಿ ವರ್ಗ ಬೇಸಾಯಕ್ಕಾಗಿ ಪರದಾಡಿದರೆ, ಜನಸಾಮಾನ್ಯರು ಕುಡಿಯುವ ನೀರಿಗಾಗಿ ಆಕ್ರಂದನ ಎಬ್ಬಿಸುತ್ತಿದ್ದಾರೆ.

ಯಗಚಿ ಜಲಾಶಯದಿಂದ ಚಿಕ್ಕಮಗಳೂರು ನಗರದ 34 ನೆ ವಾರ್ಡ್ ಆಗಿರುವ ರಾಮನಹಳ್ಳಿ ಬಡಾವಣೆಗೆ ನೀರು ಸರಬರಾಜು ಆಗಿ 4 ದಿನಗಳೇ ಕಳೆದು ಹೋಗಿದೆ ಎಂದರೆ, ಬರಗಾಲದ ತೀವ್ರತೆ ಹೇಗಿರಬಹುದು ಎನ್ನುವ ಕುರಿತು ನೀವೇ ಊಹಿಸಿಕೊಳ್ಳಿ.
  ರಾಮನಹಳ್ಳಿಯಲ್ಲಿ ಪೊಲೀಸರ ಕ್ವಾಟ್ರರ್ಸ್ ಕೂಡ ಇದೆ. ಹೆಚ್ಚಾಗಿ ಇಲ್ಲಿ ಪೊಲೀಸ್ ಕುಟುಂಬಗಳೇ ವಾಸಿಸುವ ಬಡಾವಣೆಯಾಗಿದೆ. ಆದರೂ ಕೂಡ ಇಲ್ಲಿಗೆ ಕಳೆದ 4 ದಿನಗಳಿಂದ ನೀರು ಸರಬರಾಜು ಆಗುತ್ತಿಲ್ಲ. ಈ ವಾರ್ಡ್‌ನ ಜನರು ಸಾಮೂಹಿಕವಾಗಿ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಜನರು ಎದುರಿಸುತ್ತಿರುವ ಸಮಸ್ಯೆಯನ್ನು ಮನಗಂಡು ನಗರಸಭೆ ಅಧಿಕಾರಿಗಳು ಇತ್ತ ಗಮನ ಹರಿಸಿ ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ವಾರ್ಡ್‌ನ ಜನರು ಮನವಿ ಮಾಡಿದ್ದಾರೆ.

ಈ ವಾರ್ಡ್ ನಗರಸಭೆ ಸದಸ್ಯರನ್ನು ಸ್ಥಳೀಯ ನಿವಾಸಿಗಳು ವಿಚಾರಿ ಸಿದರೆ ನೀರು ಬರುತ್ತದೆ, ಸ್ವಲ್ಪ ಅಡ್ಜೆಸ್ಟ್ ಮಾಡ್ಕಳ್ಳಿ ಎನ್ನುವ ಹಾರಿಕೆ ಉತ್ತರವನ್ನು ನೀಡುತ್ತಿದ್ದಾರೆ. ರಾಮನಹಳ್ಳಿ ನೀರಿನ ಶುದ್ಧೀಕರಣ ಘಟಕಕ್ಕೆ ಬೀಗ ಹಾಕಿದ್ದಾರೆ. ಜಲಾಶಯದಿಂದ ಈ ಘಟಕಕ್ಕೆ ನೀರು ಬರುತ್ತಿದೆಯೋ, ಇಲ್ಲವೋ ಎನ್ನುವ ಬಗ್ಗೆ ನಮಗೆ ಯಾರಿಗೂ ಗೊತ್ತಿಲ್ಲ. ವಿದ್ಯುತ್ ಸಮಸ್ಯೆ ಅಥವಾ ಮಿಷನ್‌ಗಳು ಕೆಟ್ಟು ನೀರು ಬರುತ್ತಿಲ್ಲವೋ ಎನ್ನುವ ಬಗ್ಗೆಯೂ ನಮಗೆ ತಿಳಿಯುತ್ತಿಲ್ಲ.
ವಿಶಾಲಾಕ್ಷಿ, ರಾಮನಹಳ್ಳಿ

Writer - ಅಝೀಝ್ ಕಿರುಗುಂದ

contributor

Editor - ಅಝೀಝ್ ಕಿರುಗುಂದ

contributor

Similar News